Asianet Suvarna News Asianet Suvarna News

Koppal: ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆ ರದ್ದು, ಧಾರ್ಮಿಕ ಆಚರಣೆಗೆ ಸೀಮಿತ

Jan 15, 2022, 3:01 PM IST
  • facebook-logo
  • twitter-logo
  • whatsapp-logo

ಕೋವಿಡ್‌ (Covid 19): ಹೆಚ್ಚಾಗುತ್ತಿರುವುದರಿಂದ ಜ.19 ರಿಂದ ಮೂರು ದಿನ ಕಾಲ ನಡೆಯಬೇಕಿದ್ದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ (Koppala) ಶ್ರೀಗವಿಸಿದ್ಧೇಶ್ವರ (Gavi Siddeshwara Fest) ಜಾತ್ರಾಮಹೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಸರಳವಾಗಿ ಶ್ರೀಮಠದ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕರ್ತೃ ಗದ್ದುಗೆಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ, ಉಳಿದೆಲ್ಲ ಕಾರ್ಯಕ್ರಮ ರದ್ದು ಪಡಿಸಲಾಗಿದೆ.

Chitradurga: ಕೆಟ್ಟು ಹೋಗಿರುವ ಸಿಟಿ ಸ್ಕ್ಯಾನ್, ಎಕ್ಸರೇ ಯಂತ್ರ, ಜಿಲ್ಲಾಸ್ಪತ್ರೆ ಅವ್ಯವಸ್ಥೆ

1816ರಲ್ಲಿ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆದು ದಕ್ಷಿಣ ಭಾರತದ ಕುಂಭಮೇಳ ಖ್ಯಾತಿ ಪಡೆದಿತ್ತು. 206 ವರ್ಷಗಳ ಸುದೀರ್ಘ ಇತಿಹಾಸವಿರುವ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಈವರೆಗೂ ರದ್ದಾಗಿರುವ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ಕೊರೋನಾ ಕಾರಣದಿಂದ ರದ್ದುಪಡಿಸಲಾಗಿದೆ.