Asianet Suvarna News Asianet Suvarna News

Chitradurga: ಕೆಟ್ಟು ಹೋಗಿರುವ ಸಿಟಿ ಸ್ಕ್ಯಾನ್, ಎಕ್ಸರೇ ಯಂತ್ರ , ಜಿಲ್ಲಾಸ್ಪತ್ರೆ ಅವ್ಯವಸ್ಥೆ

Jan 15, 2022, 2:19 PM IST
  • facebook-logo
  • twitter-logo
  • whatsapp-logo

ಚಿತ್ರದುರ್ಗ (ಜ. 15): ಇಲ್ಲಿತನಕ ಎಲ್ಲಾ ಚೆನ್ನಾಗಿತ್ತು, ಆದ್ರೆ ಕಳ್ಳರೆಲ್ಲಾ‌ ಬಂದ್ಮೇಲೆ ಕೋಟೆ ಬಾಗಿಲು ಹಾಕಿದ್ರು ಎಂಬಂತೆ,‌ ಕೋವಿಡ್ ಹೆಚ್ಚಾದ ಬೆನ್ನಲ್ಲೇ ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ (CT Scan) ಹಾಗೂ ಎಕ್ಸರೇ ಕೈಕೊಟ್ಟಿದೆ‌. ಹೀಗಾಗಿ ಜನಸಾಮಾನ್ಯರು ಕೋವಿಡ್ ಪತ್ತೆ ಹಚ್ಚಲು ಪರದಾಡುವಂತಾಗಿದೆ.

ಎಲ್ಲವು ಸರಾಗವಾಗಿ ನಡೆದಿದ್ರೆ, ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂದಂಕಿಯನ್ನು ದಾಟ್ತಿರಲಿಲ್ಲ. ಆದ್ರೆ ಕೋವಿಡ್ ಮೂರನೇ ಅಲೆ ದಿನದಿಂದ ದಿನಕ್ಕೆ ಆರ್ಭಟಿಸುತ್ತಿರುವಾಗಲೇ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಸಿಗ್ತಿಲ್ಲ. ಕೋವಿಡ್‌ನ ಆರಂಭದ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರಕ್ಕೆ ಮುಖ್ಯವಾಗಿ ಬೇಕಾದ ಪೆಬ್ಜಾ ಇಂಜಕ್ಷನ್ ಸೇರಿದಂತೆ ವೈದ್ಯರು‌‌ ಸೂಚಿಸುವ ಮುಖ್ಯ ಇಂಜಕ್ಷನ್‌ಗಳ ಅಭಾವ ಸೃಷ್ಟಿಯಾಗಿದೆ. ಅಲ್ಲದೇ ಆರ್ ಟಿ ಪಿಸಿ ಆರ್ ನಲ್ಲಿ ಪತ್ತೆಯಾಗದ ಸೂಕ್ಷ್ಮ ಕೋವಿಡ್ ಸೊಂಕನ್ನು ಗುರುತಿಸುವ ಸಿಟಿಸ್ಕ್ಯಾನ್ ಕೆಟ್ಟು ಮೂರ್ನಾಲ್ಕು ದಿನ ಕಳೆದಿದೆ.

Students Tested Positive Corona: ರಾಜ್ಯದ ವಿದ್ಯಾರ್ಥಿಗಳಿಗೆ ಕೊರೊನಾ, 5 ಜಿಲ್ಲೆಯಲ್ಲಿ ಶಾಲೆ ಬಂದ್!

ಕೊನೆ ಪಕ್ಷ ಎಕ್ಸರೇ‌ಯಿಂದಾದ್ರು ಕೋವಿಡ್ ಸೊಂಕನ್ನು ಖಚಿತ ಪಡಿಸಿಕೊಳ್ಳೋಣ ಅಂದ್ರೆ, ಅದು ಸಹ ಮೂಲೆ‌ಸೇರಿದೆ. ಹೀಗಾಗಿ ಜಿಲ್ಲೆಯ ಆರು ತಾಲ್ಲೂಕುಗಳಿಂದ ಬರುವ ಜನಸಾಮಾನ್ಯರು ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ‌ ಹಾಗು ಕೋವಿಡ್ ಟೆಸ್ಟ್ ಮಾಡಿಸಲಾಗದೇ‌ ಪರದಾಡುವಂತಾಗಿದೆ. ಸೊಂಕು ಪತ್ತೆ ಹಚ್ಚೋದು ತಡವಾಗಿ ಒಬ್ಬರಿಂದ ಒಬ್ಬರಿಗೆ ಸೊಂಕು ಹರಡುತ್ತಿದ್ದೂ, ಜಿಲ್ಲಾಸ್ಪತ್ರೆಯೇ ಕೊರೊನಾ ಹಾಟ್ ಸ್ಪಾಟ್ ಆಗ್ತಿದೆ‌ ಎಂಬ ಆರೋಪ ಕೇಳಿ ಬಂದಿದ್ದು ಸ್ಥಳೀಯರ ಆಕ್ರೋಶ ಕ್ಕೆ ಕಾರಣವಾಗಿದೆ.

 ಒಟ್ಟಾರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ಯಡವಟ್ಟಿನಿಂದಾಗಿ ಕೊರೋನ‌ ದಿನದಿಂದ‌ ದಿನಕ್ಕೆ ಹೆಚ್ಚಾಗ್ತಿದೆ. ರೋಗಿಗಳು ಅಗತ್ಯ ಚಿಕಿತ್ಸೆ ಹಾಗು ಕೋವಿಡ್ ಸೊಂಕು ಪತ್ತೆ ಹಚ್ಚಲು ಸೂಕ್ತ ತಂತ್ರಜ್ಞಾನ ಸಿಗದೇ ಪರದಾಡ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಕೋವಿಡ್ ವಿಕೋಪಕ್ಕೆ ತಿರುಗುವ ಮುನ್ನ ಅಗತ್ಯ‌ ಕ್ರಮ ಕೈಗೊಂಡು ಜನಸಾಮಾನ್ಯರ ಆತಂಕ ಶಮನಗೊಳಿಸಬೇಕಿದೆ.