ಮಂಗಳೂರು ಆಯ್ತು, ಕೊಡಗು ಗಡಿಯಲ್ಲೂ ಕೇರಳ ಕ್ಯಾತೆ; ಗಡಿ ಬಂದ್‌ ಮಾಡಿ ಉದ್ಧಟತನ

ಮಂಗಳೂರು ಆಯ್ತು, ಕೊಡಗು ಗಡಿಯಲ್ಲೂ ಕೇರಳ ಕ್ಯಾತೆ ತೆಗೆದಿದೆ.  ಕೊಡಗು- ಕೇರಳ ಗಡಿಯಲ್ಲಿ ಜನ ಸಂಚಾರಕ್ಕೆ ನಿರ್ಬಂಧ ಹೇರಿದೆ. ಗಡಿಯನ್ನು ಬಂದ್ ಮಾಡಿ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ

First Published Aug 26, 2020, 1:18 PM IST | Last Updated Aug 26, 2020, 1:18 PM IST

ಬೆಂಗಳೂರು (ಆ. 26): ಮಂಗಳೂರು ಆಯ್ತು, ಕೊಡಗು ಗಡಿಯಲ್ಲೂ ಕೇರಳ ಕ್ಯಾತೆ ತೆಗೆದಿದೆ.  ಕೊಡಗು- ಕೇರಳ ಗಡಿಯಲ್ಲಿ ಜನ ಸಂಚಾರಕ್ಕೆ ನಿರ್ಬಂಧ ಹೇರಿದೆ. ಗಡಿಯನ್ನು ಬಂದ್ ಮಾಡಿ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ. 

ಕಾಸರಗೋಡು ಜಿಲ್ಲೆ ಪಣತ್ತಡಿ ಪಂಚಾಯಿತಿಯಿಂದ ನಿರ್ಬಂಧ ಹೇರಲಾಗಿದೆ. ಪಂಚಾಯತಿ ಉದ್ಧಟತನದ ವಿರುದ್ಧ ಕರಿಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಆಕ್ರೋಶಕ್ಕೆ ಮಣಿದು ಸಂಚಾರಕ್ಕೆ ಸಮಯ ನಿಗದಿಪಡಿಸಿದೆ. ಬೆಳಿಗ್ಗೆ 9-11, ಸಂಜೆ 3- 4.30 ರವರೆಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಗುರುತಿನ ಚೀಟಿ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕೇರಳ ಸರ್ಕಾರದ ನೀತಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಅನುಮತಿ ಕೊಟ್ರೂ ಒಪ್ಪದ ಕೇರಳ; ಗಡಿಯಲ್ಲಿ ಕ್ಯಾತೆ