ಟಗರು ಹಾಡಿಗೆ‌ ಸಖತ್ ಹೆಜ್ಜೆ ಹಾಕಿದ ಪಾಲಿಕೆ ಕಮೀಷನರ್!

ಟಗರು ಹಾಡಿಗೆ‌ ಹಿರೋನಂತೆ ಹೆಜ್ಜೆ ಹಾಕಿದ ಮಹಾನಗರ ಪಾಲಿಕೆ ಆಯುಕ್ತ, ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಪಾಲಿಕೆ ಕಮೀಷನರ್ ಗೋಪಾಲಕೃಷ್ಣ
 

First Published Jun 25, 2022, 1:49 PM IST | Last Updated Jun 25, 2022, 1:49 PM IST

ಧಾರವಾಡ (ಜೂನ್ 25): ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ (hubli dharwad Municipal corporation Commissioner) ಗೋಪಾಲಕೃಷ್ಣ (Gopal Krishna B) ಅವರ ಡಾನ್ಸ್ ಸ್ಟೆಪ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇತ್ತೀಚೆಗೆ ನಡೆದ ಸರ್ಕಾರಿ ಕಾರ್ಯಕ್ರಮಗಳ ಕೊನೆಯಲ್ಲಿ ಗೋಪಾಲಕೃಷ್ಣ ಅವರು ನಟ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದ ಟೈಟಲ್ ಸಾಂಗ್ "ಟಗರು ಬಂತು ಟಗರು' ಹಾಡಿನ ಹುಕ್ ಸ್ಟೆಪ್ ಹಾಕುವ ಮೂಲಕ ಗಮನಸೆಳೆದರು.

ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾವ ಹೀರೋಗೂ ಕಮ್ಮಿ ಇಲ್ಲದಂತೆ, ಹುಕ್ ಸ್ಟೆಪ್ ನಲ್ಲಿ ಒಂಚೂರು ವ್ಯತ್ಯಾಸವಾಗದಂತೆ ಡಾನ್ಸ್ ಮಾಡಿ ಗಮನಸೆಳೆದರು. ಅವರ ನೃತ್ಯಕ್ಕೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ: ಕಿರಿದಾಗಲಿದೆ ಬಿಆರ್‌ಟಿಎಸ್‌ ಕಾರಿಡಾರ್‌?

ಆಯುಕ್ತ ಬಿ. ಗೋಪಾಲಕೃಷ್ಣ ಇದಕ್ಕೂ ಮುನ್ನ ಧಾರವಾಡ ಸಬ್ ಡಿವಿಷನ್‌ನ ಉಪ ಆಯುಕ್ತರಾಗಿ ಕೆಲಸ ಮಾಡಿದ್ದರು. 2018ರ ಬ್ಯಾಚ್‌ನ ಐಎಎಸ್ ಅಧಿಕಾರಿ ಇವರಾಗಿದ್ದಾರೆ. 

Video Top Stories