ಕಲಬುರಗಿಯಲ್ಲಿ ನಿಂತಲ್ಲೇ ಕೊಳೆಯುತ್ತಿವೆ ಆ್ಯಂಬುಲೆನ್ಸ್ ; ಆರೋಗ್ಯ ಇಲಾಖೆಯಿಂದ ಬೇಜವಾಬ್ದಾರಿ ಉತ್ತರ
ಕೋವಿಡ್ ಸಂದರ್ಭದಲ್ಲಿ ಕೇಳಿ ಬಂದ ದೊಡ್ಡ ಆರೋಪವೆಂದರೆ ಆ್ಯಂಬುಲೆನ್ಸ್ ಸಿಗುತ್ತಿಲ್ಲ, ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಬರುತ್ತಿಲ್ಲ, ಆಟೋಗಳಲ್ಲಿ ಪರದಾಡಬೇಕಾಯಿತು ಎಂಬೆಲ್ಲಾ ಆರೋಪಗಳನ್ನು ಕೇಳಿ ಬಂದಿದ್ದವು. ಆ್ಯಂಬುಲೆನ್ಸ್ ಇಲ್ಲದೇ ಸೋಂಕಿತರು ಪರದಾಡುತ್ತಿರುವುದನ್ನು ಸುವರ್ಣ ನ್ಯೂಸ್ ವರದಿ ಮಾಡಿತ್ತು. ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುತ್ತೇವೆಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಅದು ಇದುವರೆಗೂ ಈಡೇರಿಲ್ಲ.
ಬೆಂಗಳೂರು (ಆ. 26): ಕೋವಿಡ್ ಸಂದರ್ಭದಲ್ಲಿ ಕೇಳಿ ಬಂದ ದೊಡ್ಡ ಆರೋಪವೆಂದರೆ ಆ್ಯಂಬುಲೆನ್ಸ್ ಸಿಗುತ್ತಿಲ್ಲ, ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಬರುತ್ತಿಲ್ಲ, ಆಟೋಗಳಲ್ಲಿ ಪರದಾಡಬೇಕಾಯಿತು ಎಂಬೆಲ್ಲಾ ಆರೋಪಗಳನ್ನು ಕೇಳಿ ಬಂದಿದ್ದವು. ಆ್ಯಂಬುಲೆನ್ಸ್ ಇಲ್ಲದೇ ಸೋಂಕಿತರು ಪರದಾಡುತ್ತಿರುವುದನ್ನು ಸುವರ್ಣ ನ್ಯೂಸ್ ವರದಿ ಮಾಡಿತ್ತು. ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುತ್ತೇವೆಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಅದು ಇದುವರೆಗೂ ಈಡೇರಿಲ್ಲ.
ಕಲಬುರಗಿ DHO ಕಚೇರಿ ಆವರಣದಲ್ಲಿ ನಿಂತಲ್ಲೆ ಕೊಳೆಯುತ್ತಿವೆ 20 ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು. ಈ ಬಗ್ಗೆ ಪ್ರಶ್ನಿಸಿದರೆ 15 ವರ್ಷ ಹಳೆ ಆಂಬುಲೆನ್ಸ್ ಎಂದು ಆರೋಗ್ಯ ಇಲಾಖೆ ತೇಪೆ ಸಾರಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಇದನ್ನು ರಿಪೇರಿ ಮಾಡಿ ಬಳಸಬಹುದಿತ್ತಲ್ವಾ? ಆದರೆ ಆರೋಗ್ಯ ಇಲಾಖೆ ಬೇಜವಾಬ್ದಾರಿಯಾಗಿ ವರ್ತಿಸಿದೆ.