Hijab Row: ಸೋಮವಾರದಿಂದ ಹೈಸ್ಕೂಲ್ ಆರಂಭ, ಇಂದು ಸಿಎಂ ಹೈಅಲರ್ಟ್ ಸಭೆ
ರಾಜ್ಯದಲ್ಲಿ ಹೊತ್ತಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ಕಿಡಿಯನ್ನು ತಣ್ಣಗಾಗಿಸಲು ಬಂದ್ ಮಾಡಲಾಗಿರುವ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಬೇಕಾದ ಅಗತ್ಯ ಇದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಸೋಮವಾರದಿಂದ ಪ್ರೌಢಶಾಲೆಗಳನ್ನು ಮಾತ್ರ ಆರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಬೆಂಗಳೂರು (ಫೆ. 11): ರಾಜ್ಯದಲ್ಲಿ ಹೊತ್ತಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ಕಿಡಿಯನ್ನು ತಣ್ಣಗಾಗಿಸಲು ಬಂದ್ ಮಾಡಲಾಗಿರುವ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಬೇಕಾದ ಅಗತ್ಯ ಇದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಸೋಮವಾರದಿಂದ ಪ್ರೌಢಶಾಲೆಗಳನ್ನು ಮಾತ್ರ ಆರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಕಾಲೇಜುಗಳನ್ನು ಮುಂದಿನ ಹಂತದಲ್ಲಿ ಆರಂಭಿಸಲು ಉದ್ದೇಶಿಸಿದೆ.
News Hour: ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಪಾಠ
ಗುರುವಾರ ನ್ಯಾಯಾಲಯ ಮಧ್ಯಂತರ ಆದೇಶ ನೀಡುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿ ವಿಸ್ತೃತವಾಗಿ ಚರ್ಚೆ ನಡೆಸಿದರು. ಸಭೆಯಲ್ಲಿ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯದ ಕುರಿತು ಚರ್ಚಿಸಿ ರಾಜ್ಯದಲ್ಲಿ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ನೀಡಿರುವ ರಜೆಯನ್ನು ಕಾಲೇಜುಗಳಿಗೆ ವಿಸ್ತರಣೆ ಮಾಡಿ, 9 ಮತ್ತು 10ನೇ ತರಗತಿಯನ್ನು ಮಾತ್ರ ಸೋಮವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ. ಇಂದು ಸಂಜೆಯೂ ಸಿಎಂ ಮಹತ್ವದ ಸಭೆ ನಡೆಸಿದ್ದಾರೆ.