Hijab Row: 'ಶಾಲೆ ಬಿಡಬೇಕು, ಇಲ್ಲಾ ತತ್ವ ಬಿಡಬೇಕು ಎಂಬಂತಾಗಿದೆ, ಹಿಜಾಬ್‌ಗೆ ಅವಕಾಶ ಕೊಡಿ'
‘ವಿಗ್ರಹಗಳನ್ನು ಅಪವಿತ್ರಗೊಳಿಸಿದರೆ, ಜನರ ಭಾವನೆಗಳನ್ನು ಘಾಸಿಯಾಗಿ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎನ್ನಬಹುದು. ಆದರೆ, ಮಹಿಳೆಯರು ತಲೆಯನ್ನು ಮುಚ್ಚುವುದು ಯಾವ ರೀತಿಯ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ? ವಿದ್ಯಾರ್ಥಿನಿಯರ ಪರ ವಕೀಲರು
ಬೆಂಗಳೂರು (ಫೆ. 25): ಹಿಜಾಬ್ (Hijab Row) ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ವಿಸ್ತೃತ ಪೀಠದ ಮುಂದೆ ನ್ಯೂ ಹೊರೈಜಾನ್ ಕಾಲೇಜಿನ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ಎ.ಎಂ.ಧರ್ ವಾದ ಮಂಡಿಸಿದರು.
‘ವಿಗ್ರಹಗಳನ್ನು ಅಪವಿತ್ರಗೊಳಿಸಿದರೆ, ಜನರ ಭಾವನೆಗಳನ್ನು ಘಾಸಿಯಾಗಿ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎನ್ನಬಹುದು. ಆದರೆ, ಮಹಿಳೆಯರು ತಲೆಯನ್ನು ಮುಚ್ಚುವುದು ಯಾವ ರೀತಿಯ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ? ಪ್ರವಾದಿಯವರು ಹೇಳಿರುವ ಎಲ್ಲದಕ್ಕೂ ನಾವು ಬದ್ಧವಾಗಿರಬೇಕು. ಇಲ್ಲವಾದರೆ ನಾವು ಮುಸ್ಲಿಮರಾಗಲು ಸಾಧ್ಯವಿಲ್ಲ. ಉತ್ತಮ ಜೀವನ ನಡೆಸಬೇಕಾದರೆ ನಾವು ಅದನ್ನು ಅನುಸರಿಸಬೇಕು’ ಎಂದರು.
Hijab Row: ಹೈಕೋರ್ಟ್‌ನಲ್ಲಿ ಅಂಗಳದಲ್ಲಿ ಹಿಜಾಬ್ ವಾದ-ಪ್ರತಿವಾದ ಹೇಗಿತ್ತು?
ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡಿಸಿ, ‘ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸುವುದು ಸರಿಯಲ್ಲ. ಮಕ್ಕಳ ನಡುವೆ ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು. ಜಾತ್ಯತೀತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಸಮವಸ್ತ್ರ ಜಾರಿ ಮಾಡಲಾಗಿದ್ದು, ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವುದು ಸರ್ಕಾರದ ಆದೇಶದ ಉದ್ದೇಶವಲ್ಲ. ಜಾತ್ಯತೀತ ಶಿಕ್ಷಣ ಜಾರಿಯಾಗುವಂತೆ ನೋಡಿಕೊಳ್ಳುವುದಷ್ಟೇ ಸರ್ಕಾರದ ಉದ್ದೇಶ’ ಎಂದು ವಿವರಿಸಿದರು.