Covid 19: ಜನರ ಮೇಲೆ ಜವಾಬ್ದಾರಿ, ಸೋಂಕು ಹೆಚ್ಚಾದರೆ ಟಫ್‌ರೂಲ್ಸ್: ಡಾ. ಸುಧಾಕರ್
ಕೊರೊನಾ ತೀವ್ರತೆ ಕಡಿಮೆಯಾಗಿದ್ದಕ್ಕೆ ವೀಕೆಂಡ್ ಕರ್ಫ್ಯೂ (Weekend Curfew) ತೆರವುಗೊಳಿಸಿದ್ದೇವೆ. 3 ನೇ ಅಲೆ ತೀವ್ರತೆ ಹೆಚ್ಚಾದರೆ ಮತ್ತೆ ಟಫ್‌ರೂಲ್ಸ್ ಜಾರಿಗೆ ತರುತ್ತೇವೆ: ಡಾ. ಸುಧಾಕರ್
ಬೆಂಗಳೂರು (ಜ. 23): ಕೊರೊನಾ ತೀವ್ರತೆ ಕಡಿಮೆಯಾಗಿದ್ದಕ್ಕೆ ವೀಕೆಂಡ್ ಕರ್ಫ್ಯೂ (Weekend Curfew) ತೆರವುಗೊಳಿಸಿದ್ದೇವೆ. 3 ನೇ ಅಲೆ ತೀವ್ರತೆ ಹೆಚ್ಚಾದರೆ ಮತ್ತೆ ಟಫ್‌ರೂಲ್ಸ್ ಜಾರಿಗೆ ತರುತ್ತೇವೆ. ಜನರ ಕಷ್ಟ ದೂರ ಮಾಡುವ ಹೊಣೆ ಸರ್ಕಾರದ ಮೇಲಿದೆ. ಕೊರೊನಾ ವಿಚಾರಕ್ಕೆ ಜನರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಒಂದೊಮ್ಮೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ಟಫ್‌ರೂಲ್ಸ್ ತರುತ್ತೇವೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
Night Curfew: ಅವಧಿ ಕಡಿತಗೊಳಿಸಿ, ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ, ಸಿಎಂ ಭೇಟಿಗೆ ನಿರ್ಧಾರ