Siddaramaiah VS HDK: ಸಿದ್ದರಾಮಯ್ಯ ಸ್ವಯಂಘೋಷಿತ ಸಂವಿಧಾನ ಪಂಡಿತ: ಎಚ್‌ಡಿಕೆ ಕಿಡಿ

ತುಮಕೂರಿನಿಂದ (Tumakuru) ಜೆಡಿಎಸ್ (JDS) ಓಡಿಸಿ ಎಂದ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 'ಸುಳ್ಳಿನ ಸಿದ್ಧ ಪುರುಷರಿಂದ ಭಾಷೆ- ಸಂಸ್ಕೃತಿ ಕುರಿತು ಪಾಠವೇ.? ತುಮಕೂರಿನಿಂದ ಜೆಡಿಎಸ್ ಓಡಿಸಿ ಅನ್ನೋದು ಎಂಥಾ ರಾಜಕಾರಣ.? ಎಂದು ಪ್ರಶ್ನಿಸಿದ್ದಾರೆ. 

First Published Jan 23, 2022, 2:27 PM IST | Last Updated Jan 23, 2022, 3:06 PM IST

ಬೆಂಗಳೂರು (ಜ. 23): ತುಮಕೂರಿನಿಂದ (Tumakuru) ಜೆಡಿಎಸ್ (JDS) ಓಡಿಸಿ ಎಂದ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 'ಸುಳ್ಳಿನ ಸಿದ್ಧ ಪುರುಷರಿಂದ ಭಾಷೆ- ಸಂಸ್ಕೃತಿ ಕುರಿತು ಪಾಠವೇ.? ತುಮಕೂರಿನಿಂದ ಜೆಡಿಎಸ್ ಓಡಿಸಿ ಅನ್ನೋದು ಎಂಥಾ ರಾಜಕಾರಣ.? ಎಂದು ಪ್ರಶ್ನಿಸಿದ್ದಾರೆ. 

Night Curfew: ಅವಧಿ ಕಡಿತಗೊಳಿಸಿ, ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ, ಸಿಎಂ ಭೇಟಿಗೆ ನಿರ್ಧಾರ

'ಸ್ವಯಂ ಘೋಷಿತ ಸಂವಿಧಾನ ಪಂಡಿತ " ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ. ಇನ್ನು ಕಮೀಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಐದು ವರ್ಷ ಸಿಎಂ ಆಗಿದ್ದರೂ ನಾನು ಕ್ಲೀನ್ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಇವತ್ತಿಗೂ ಕೇಳಿಸುತ್ತಿರುವ ' ಅರ್ಕಾವತಿ ' ಆರ್ತನಾದಕ್ಕೆ ಕಾರಣರು ಯಾರು? ಎಂದು ಪ್ರತ್ಯುತ್ತರ ನೀಡಿದ್ದಾರೆ. 

Video Top Stories