Asianet Suvarna News Asianet Suvarna News

BBMP ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ FIR ದಾಖಲು..!

ಕೊರೋನಾ ಸೋಂಕು ತಗುಲಿದ್ದರೂ ಕೂಡಾ ಇಮ್ರಾನ್ ಪಾಷಾ ತಕ್ಷಣ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಮನೆಗೆ ಧಾವಿಸಿದ ಆರೋಗ್ಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಮೇಲೂ ಆಟಾಟೋಪ ಮಾಡಿದ್ದರು. 

ಬೆಂಗಳೂರು(ಮೇ.31): ಮಾರಣಾಂತಿಕ ಸೋಂಕು ಹರಡುವಿಕೆ, ಕ್ವಾರಂಟೈನ್‌ಗೆ ಅಸಹಕಾರ ತೋರಿದ ಆರೋಪದಡಿ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಜೆ ಜೆ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಕೊರೋನಾ ಸೋಂಕು ತಗುಲಿದ್ದರೂ ಕೂಡಾ ಇಮ್ರಾನ್ ಪಾಷಾ ತಕ್ಷಣ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಮನೆಗೆ ಧಾವಿಸಿದ ಆರೋಗ್ಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಮೇಲೂ ಆಟಾಟೋಪ ಮಾಡಿದ್ದರು. 

ಕೊರೋನಾತಂಕ: ಇ-ಪಾಸ್‌ ಇಲ್ಲದವರನ್ನು ತಡೆಯಿರಿ, ಸಚಿವ ಬೊಮ್ಮಾಯಿ

ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 270, 271 ಅಡಿ ಇಮ್ರಾನ್ ಪಾಷಾ ಅವರ ವಿರುದ್ಧ FIR ದಾಖಲಾಗಿದೆ. ಸದ್ಯ ಇಮ್ರಾನ್ ಪಾಷಾ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಮುಗಿದು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮುಗಿಸಿ ಪಾಷಾ ಠಾಣೆಗೆ ಹಾಜರಾಗಬೇಕಾಗುತ್ತದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.