Exclusive: ಫಾಝಿಲ್ ಹತ್ಯೆ ಪ್ರಕರಣ, ಕಾರ್ ಡ್ರೈವರ್ ಪೊಲೀಸ್ ವಶಕ್ಕೆ
ಪಾಝಿಲ್ ಹತ್ಯೆ ಪ್ರಕರಣದಲ್ಲಿ ಕಾರು ಡ್ರೈವರ್ ಆಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂತಕರಿಗೆ ಕಾರು ಚಾಲಕ ಸಾಥ್ ನೀಡಿದ್ದ ಎನ್ನಲಾಗಿದೆ. ಅತನ ವಿಚಾರಣೆ ಮುಂದುವರೆದಿದೆ.
ಬೆಂಗಳೂರು (ಜು. 31): ಪಾಝಿಲ್ ಹತ್ಯೆ ಪ್ರಕರಣದಲ್ಲಿ ಕಾರು ಡ್ರೈವರ್ ಆಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂತಕರಿಗೆ ಕಾರು ಚಾಲಕ ಸಾಥ್ ನೀಡಿದ್ದ ಎನ್ನಲಾಗಿದೆ. ಅತನ ವಿಚಾರಣೆ ಮುಂದುವರೆದಿದೆ.
ಸುರತ್ಕಲ್‌ನಲ್ಲಿ ಜು.28ರಂದು ರಾತ್ರಿ ನಡೆದ ಮೊಹಮ್ಮದ್ ಫಾಝಿಲ್ ಹತ್ಯೆಯ ದುಷ್ಕರ್ಮಿಗಳು ಸುಳಿವು ಲಭ್ಯವಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಪೊಲೀಸರು ನಿರಾಕರಿಸಿದ್ದಾರೆ.
ಮಿಸ್ ಆದ ಸ್ಕೆಚ್‌ಗೆ ಬಲಿಯಾದ್ರಾ ಪ್ರವೀಣ್? ಚಿಕನ್ ಬ್ಯುಸಿನೆಸ್ ಹೋರಾಟದಿಂದ ಪ್ರಾಣಕ್ಕೆ ಕುತ್ತು?
ಇಲ್ಲಿವರೆಗೆ ಒಟ್ಟು 21 ಮಂದಿಯನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ 6 ಮಂದಿ ತೀವ್ರ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ಆರೋಪಿಗಳ ಸುಳಿವು ಬಹುತೇಕ ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.