Asianet Suvarna News Asianet Suvarna News

ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಹಿಂದಿದ್ಯಾ ಪ್ಲ್ಯಾನ್‌, ಜಮೀರ್‌ ಅಹ್ಮದ್‌ರಿಂದ ಸಿಗಲಿದ್ಯಾ ರಾಜಾತಿಥ್ಯ?

ಸೆಂಟ್ರಲ್​ ಜೈಲಿನಿಂದ ರಾತ್ರೋರಾತ್ರಿ ಡಿ ಗ್ಯಾಂಗ್ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಬಳ್ಳಾರಿ ಜೈಲ್ ಸುದ್ದಿ ಕೇಳಿ ದರ್ಶನ್‌ ಮೌನಕ್ಕೆ ಜಾರಿದ್ದಾರೆ. ಬೇರೆ ಜೈಲಿಗೆ ಕಳಿಸಬೇಡಿ ಎಂದು ಪ್ರದೂಷ್ ಕೋರ್ಟ್‌ ಎದುರು ಅಂಗಲಾಚಿದ್ದಾನೆ.
 

First Published Aug 28, 2024, 11:14 PM IST | Last Updated Aug 28, 2024, 11:14 PM IST


ಬೆಂಗಳೂರು (ಆ.28): ಕೊಲೆ ಆರೋಪಿ ದರ್ಶನ್‌ ಬಳ್ಳಾರಿ ಶಿಫ್ಟ್‌ ಮಾಡೋ ಹಿಂದೆ ಪ್ಲ್ಯಾನ್‌ ಇದ್ಯಾ ಎನ್ನುವ ಅನುಮಾನ ಕಾಡಿದೆ. ಬಳ್ಳಾರಿ ಜೈಲಲ್ಲೂ ಕಿಲ್ಲಿಂಗ್‌ ಸ್ಟಾರ್‌ಗೆ ರಾಜಾತಿಥ್ಯ ಸಿಗಲಿದ್ಯಾ ಎನ್ನುವ ಅನುಮಾನ ಎದ್ದಿದೆ. ಯಾಕೆಂದರೆ, ದರ್ಶನ್‌ ಅವರ ಆಪ್ತ ಹಾಗೂ ಕಾಂಗ್ರೆಸ್‌ ಸರ್ಕಾರದ ವಸತಿ ಸಚಿವ ಬಳ್ಳಾರಿ ಪಕ್ಕದ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದಾರೆ.

ವಸತಿ ಸಚಿವ ಜಮೀರ್ ಅಹ್ಮದ್ ಹಾಗೂ ದರ್ಶನ್​ ಪರಮಾಪ್ತರು ಅನ್ನೋದು ಗೊತ್ತಿರುವ ವಿಚಾರ. ಹಂಪಿ ಉತ್ಸವಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್‌ ದರ್ಶನ್‌ರನ್ನ ಕರೆತಂದಿದ್ದರು. ಹೀಗಾಗಿ ಜಮೀರ್ ಅವರಿಂದಲೇ ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ ಫಿಕ್ಸ್‌ ಆಗಬಹುದು ಎನ್ನಲಾಗ್ತಿದೆ.

Bengaluru: ಪತ್ನಿ ನಿದ್ರೆಯಲ್ಲಿದ್ದಾಗಲೇ ಡೂಪ್ಲಿಕೇಟ್‌ ಕೀ ಬಳಸಿ ಕತ್ತು ಕುಯ್ದು ಹೋದ ಪತಿ!

ದರ್ಶನ್ ಬಳ್ಳಾರಿ ಜೈಲಿಗೆ, ಅದೆಲ್ಲ ಜೈಲಾಧಿಕಾರಿಗೆ ಬಿಟ್ಟಿದ್ದೇವೆ. ಇನ್ಮೇಲೆ ಜೈಲು ಅಧಿಕಾರಿಗಳೇ ಎಲ್ಲಾ ನೋಡಿಕೊಳ್ಳುತ್ತಾರೆ. ಜಮೀರ್ ಅಹ್ಮದ್ ವಿಜಯನಗರ ಉಸ್ತುವಾರಿ ಸಚಿವರು. ನಟ ದರ್ಶನ್ ಪ್ರಕರಣ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
 

Video Top Stories