Cover Story Impact: ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ, ಎಂಡಿ ಲೀಲಾವತಿ ಸಸ್ಪೆಂಡ್

 ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು 'ಕವರ್‌ ಸ್ಟೋರಿ' (CoverStory)  ಬಯಲಿಗೆಳೆದಿತ್ತು. ವರದಿ ಪ್ರಸಾರವಾಗುತ್ತಿದ್ದ ಎಚ್ಚರಗೊಂಡ ಸಮಾಜಕಲ್ಯಾಣ ಇಲಾಖೆ, ಆರೋಪ ಹೊತ್ತ ಎಂಡಿ ಲೀಲಾವತಿಯನ್ನು ಕೂಡಲೇ ಅಮಾನತುಗೊಳಿಸಿದೆ. (Suspend)

First Published Dec 11, 2021, 6:09 PM IST | Last Updated Dec 11, 2021, 6:09 PM IST

ಬೆಂಗಳೂರು (ಡಿ. 11):  ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು 'ಕವರ್‌ ಸ್ಟೋರಿ' (CoverStory)  ಬಯಲಿಗೆಳೆದಿತ್ತು. ವರದಿ ಪ್ರಸಾರವಾಗುತ್ತಿದ್ದ ಎಚ್ಚರಗೊಂಡ ಸಮಾಜಕಲ್ಯಾಣ ಇಲಾಖೆ, ಆರೋಪ ಹೊತ್ತ ಎಂಡಿ ಲೀಲಾವತಿಯನ್ನು ಕೂಡಲೇ ಅಮಾನತುಗೊಳಿಸಿದೆ. ಜನರಲ್ ಮ್ಯಾನೇಜರ್ ನಾಗರಾಜಪ್ಪ ಕೂಡಾ ಸಸ್ಪೆಂಡ್ ಆಗಿದ್ದಾರೆ. (Suspend) ಕರ್ತವ್ಯದಿಂದ ಕೂಡಲೇ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಶ್ರೀನಿವಾಸ್ ಪೂಝಾರಿ ಆದೇಶ ನೀಡಿದ್ದಾರೆ.

Cover Story: ಭ್ರಷ್ಟಾಚಾರದ ಕೂಪವಾಗಿದೆ ಭೋವಿ ಅಭಿವೃದ್ಧಿ ನಿಗಮ

'ನಿಗಮದಲ್ಲಿ ಪಾರದರ್ಶಕತೆ, ಶೀಘ್ರವೇ ಹೆಲ್ಪ್‌ ಲೈನ್ ಆರಂಭಿಸುತ್ತೇವೆ. ಎಲ್ಲಾ ವಿಚಾರವನ್ನೂ 2 ದಿನದಲ್ಲಿ ಸಿಎಂ ಗಮನಕ್ಕೂ ತರುತ್ತೇನೆ. ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕುವುದಾಗಿ' ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.