Cover Story: ಭೋವಿ ನಿಗಮದ ಕರ್ಮಕಾಂಡ, ಇನ್ನೂ ಸೇವೆಯಲ್ಲಿದ್ದಾರೆ ಅಮಾನತ್ತಾಗಿರುವ ಅಧಿಕಾರಿಗಳು

ಭ್ರಷ್ಟಚಾರದ ಕೂಪವಾಗಿರುವ ಭೋವಿ ಅಭಿವೃದ್ಧಿ ನಿಗಮದ ಬಗ್ಗೆ 'ಕವರ್ ಸ್ಟೋರಿ' (Cover Story) ಕಾರ್ಯಾಚರಣೆ ನಡೆಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಚೇರಿ ಇರಬೇಕೇ ವಿನಃ ಅಧಿಕಾರಿಗಳ ಅನುಕೂಲಕ್ಕಾಗಿ ಅಲ್ಲ. 

First Published Dec 27, 2021, 11:44 AM IST | Last Updated Dec 27, 2021, 11:56 AM IST

ಬೆಂಗಳೂರು (ಡಿ. 27): ಭ್ರಷ್ಟಚಾರದ ಕೂಪವಾಗಿರುವ ಭೋವಿ ಅಭಿವೃದ್ಧಿ ನಿಗಮದ ಬಗ್ಗೆ 'ಕವರ್ ಸ್ಟೋರಿ' (Cover Story) ಕಾರ್ಯಾಚರಣೆ ನಡೆಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಚೇರಿ ಇರಬೇಕೇ ವಿನಃ ಅಧಿಕಾರಿಗಳ ಅನುಕೂಲಕ್ಕಾಗಿ ಅಲ್ಲ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಬೋವಿ ಅಭಿವೃದ್ಧಿ ನಿಗಮ ಕಚೇರಿಯನ್ನು ಸ್ಥಳಾಂತರ ಮಾಡಿ ಎಂದರೆ, ಮಾಡಲು ಬಿಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ (Govt Office) ಹಣ ನೀಡದೇ ಕೆಲಸವೇ ಆಗಲ್ಲ. ಈ ಬಗ್ಗೆ ಕವರ್ ಸ್ಟೋರಿ ತಂಡ  ವರದಿ ಪ್ರಸಾರ ಮಾಡಿತ್ತು. 

Cover Story Impact: ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ, ಎಂಡಿ ಲೀಲಾವತಿ ಸಸ್ಪೆಂಡ್

 ವರದಿ ಪ್ರಸಾರವಾಗುತ್ತಿದ್ದ ಎಚ್ಚರಗೊಂಡ ಸಮಾಜಕಲ್ಯಾಣ ಇಲಾಖೆ, ಆರೋಪ ಹೊತ್ತ ಎಂಡಿ ಲೀಲಾವತಿಯನ್ನು ಕೂಡಲೇ ಅಮಾನತುಗೊಳಿಸಿದೆ. ಜನರಲ್ ಮ್ಯಾನೇಜರ್ ನಾಗರಾಜಪ್ಪ ಕೂಡಾ ಸಸ್ಪೆಂಡ್ ಆಗಿದ್ದಾರೆ. (Suspend) ಕರ್ತವ್ಯದಿಂದ ಕೂಡಲೇ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಶ್ರೀನಿವಾಸ್ ಪೂಝಾರಿ ಆದೇಶ ನೀಡಿದ್ದಾರೆ. ಆದರೆ ಇದು ನೆಪ ಮಾತ್ರ. ಅಮಾನತಾಗಿರುವ ಅಧಿಕಾರಿಗಳು ಇನ್ನೂ ಅಧಿಕಾರದಲ್ಲೇ ಇದ್ದಾರೆ. ಹಾಗಾದರೆ ಈ ಅಧಿಕಾರಿಗಳ ಪರ ನಿಂತರಾ ಸಚಿವರು..?