ಕೊರೊನಾ ಮಹಾಸ್ಫೋಟ: ಡಿಸಂಬರ್ ವೇಳೆಗೆ ಶೇ. 50 ರಷ್ಟು ಮಂದಿಗೆ ಸೋಂಕು
ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ಡಿಸಂಬರ್ ವೇಳೆಗೆ ಶೇ. 50 ರಷ್ಟು ಮಂದಿಗೆ ಕೊರೋನಾ ಸೋಂಕು ಹರಡಿರುತ್ತದೆ. ಆದರೆ ಬಹುತೇಕ ಮಂದಿಗೆ ತಮಗೆ ಕೊರೊನಾ ಸೋಂಕು ಹರಡಿರುವುದು ಸಹ ಗೊತ್ತಾಗುವುದಿಲ್ಲ, ಹೀಗಂತ ಹೇಳುತ್ತಾರೆ ಖ್ಯಾತ ವೈರಾಣು ತಜ್ಞ ಹಾಗೂ ಸರ್ಕಾರದ ತಜ್ಞರ ಸಮಿತಿ ಸದಸ್ಯ ಡಾ. ರವಿ.
ಬೆಂಗಳೂರು (ಮೇ. 30): ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ಡಿಸಂಬರ್ ವೇಳೆಗೆ ಶೇ. 50 ರಷ್ಟು ಮಂದಿಗೆ ಕೊರೋನಾ ಸೋಂಕು ಹರಡಿರುತ್ತದೆ. ಆದರೆ ಬಹುತೇಕ ಮಂದಿಗೆ ತಮಗೆ ಕೊರೊನಾ ಸೋಂಕು ಹರಡಿರುವುದು ಸಹ ಗೊತ್ತಾಗುವುದಿಲ್ಲ, ಹೀಗಂತ ಹೇಳುತ್ತಾರೆ ಖ್ಯಾತ ವೈರಾಣು ತಜ್ಞ ಹಾಗೂ ಸರ್ಕಾರದ ತಜ್ಞರ ಸಮಿತಿ ಸದಸ್ಯ ಡಾ. ರವಿ.
ಟರ್ಕಿಯನ್ನು ಹಿಂದಿಕ್ಕಿದ ಭಾರತ; ಸೋಂಕಿತರ ಪಟ್ಟಿಯಲ್ಲಿ 9 ನೇ ಸ್ಥಾನ
ಲಾಕ್‌ಡೌನ್ ಬಳಿಕ ಕೊರೊನಾ ಸೋಂಕು ಸಮುದಾಯಕ್ಕೂ ಬರುತ್ತದೆ. ಹೀಗಾಗಿ ಡಿಸಂಬರ್ ವೇಳೆಗೆ ಶೇ. 50 ರಷ್ಟು ಮಂದಿಗೆ ಸೋಂಕು ಹರಡಬಹುದು. ಸೋಂಕು ಲಕ್ಷಣ ಇಲ್ಲದವರಿಗೆ ಹರಡುವುದು ತೀರಾ ಕಡಿಮೆ. ಹಾಗಾಗಿ ಸೋಂಕಿದ್ದವರಿಗೆ ಮಾತ್ರ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿದರೆ ಸಾಕು' ಎಂದಿದ್ದಾರೆ.