ಕೊರೋನಾ ಆತಂಕ: ಮಂಡ್ಯ ಜಿಲ್ಲಾಡಳಿತದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ

ಮಹಾರಾಷ್ಟ್ರದಿಂದ ಮಂಡ್ಯವರೆಗೂ ಮೃತ ದೇಹ ತಂದಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುರಕ್ಷತಾ ಕ್ರಮವನ್ನು ವಹಿಸದೇ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದು ಏಕೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First Published May 1, 2020, 5:34 PM IST | Last Updated May 1, 2020, 5:59 PM IST

ಮಂಡ್ಯ(ಮೇ.01): ಮಹಾರಾಷ್ಟ್ರದಿಂದ ಬಂದ ಒಂದು ಆಂಬ್ಯುಲೆನ್ಸ್ ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪೀಡಿತರನ್ನು ಹೊಂದಿರುವ ಮಹಾರಾಷ್ಟದಿಂದ ಒಂದು ದೇಹವನ್ನು ಮಂಡ್ಯಕ್ಕೆ ತಂದು ಮಣ್ಣು ಮಾಡಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದಿಂದ ಮಂಡ್ಯವರೆಗೂ ಮೃತ ದೇಹ ತಂದಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುರಕ್ಷತಾ ಕ್ರಮವನ್ನು ವಹಿಸದೇ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದು ಏಕೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"

'ನನ್ನ ಅವಧಿಯ ಹಣದಲ್ಲಿ ಕೆಲಸ ನಡೆಯುತ್ತಿದೆ' ಸರ್ಕಾರಕ್ಕೆ HDK ಸರಣಿ ಪ್ರಶ್ನೆ

ಮುಂಬೈನಿಂದ ಮಂಡ್ಯಕ್ಕೆ ಮೃತದೇಹವನ್ನು ತರಲಾಗಿತ್ತು. ಇನ್ನು ಯಾವುದೇ ಪಿಪಿಇ ಕಿಟ್ ಹಾಕಿಕೊಳ್ಳದೇ ಶವ ಪರೀಕ್ಷೆ ನಡೆಸಿದ ವೈದ್ಯೆಗೂ ಕೊರೋನಾ ಭೀತಿ ಎದುರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.