ವಾಲ್ಮೀಕಿ ಪ್ರಶಸ್ತಿ: ಗಣ್ಯರನ್ನ ಸನ್ಮಾನಿಸಿದ ಸಿಎಂ ಬೊಮ್ಮಾಯಿ
* 2020-21ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ
* 11 ಗಣ್ಯರಿಗೆ ವಾಲ್ಮೀಕಿ ಪ್ರಶಸ್ತಿ ಕೊಟ್ಟು ಗೌರವಿಸಿದ CM ಬೊಮ್ಮಾಯಿ
* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ
ಬೆಂಗಳೂರು(ಅ.20): ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಗಣ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2020-21ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 11 ಗಣ್ಯರಿಗೆ ಪ್ರಶಸ್ತಿ ಕೊಟ್ಟು ಗೌರವಿಸಿ ಮಾತನಾಡಿದ ಸಿಎಂ, ನಾನು ಮುಖ್ಯಮಂತ್ರಿಯಾದ ನನ್ನ ಮೊದಲ ಸಚಿವ ಸಂಪುಟದಲ್ಲಿ ಪರಿಶಿಷ್ಟ ಪಂಗಡ(ಎಸ್‌ಟಿ) ಜನಾಂಗಕ್ಕೆ ಒಂದು ತನ್ನದೆ ಆದ ಸಚಿವಾಲಯಕ್ಕೆ ಇರಬೇಕು ಎಂದು ತೀರ್ಮಾಣ ತೆಗೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.