ಕೊರೊನಾದಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆ, ಪಿಎಫ್‌ಐ ಕಾರ್ಯಕರ್ತರಿಂದ ಮಾನವೀಯ ಕೆಲಸ

- ಚಾಮರಾಜನಗರದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿ ಅಂತ್ಯಕ್ರಿಯೆ 

- ಪಿಎಫ್‌ಐ ಕಾರ್ಯಕರ್ತರ ಮಾನವೀಯ ಕೆಲಸ ಇದು. 

- ಕೊಳ್ಳೇಗಾಲ ತಾ. ಆಲದಹಳ್ಳಿಯಲ್ಲಿ ಅಂತ್ಯಕ್ರಿಯೆ 

First Published May 10, 2021, 3:11 PM IST | Last Updated May 10, 2021, 3:22 PM IST

ಬೆಂಗಳೂರು (ಮೇ. 10): ಒಂದು ಕಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಇನ್ನೊಂದು ಕಡೆ ಮೃತಪಟ್ಟವರಿಗೆ ಆಂಬುಲೆನ್ಸ್ ಕೂಡಾ ಸಿಗುತ್ತಿಲ್ಲ. ಚಾಮರಾಜನಗರದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿ ಅಂತ್ಯಕ್ರಿಯೆ ಮಾಡಲಾಗಿದೆ. ಪಿಎಫ್‌ಐ ಕಾರ್ಯಕರ್ತರ ಮಾನವೀಯ ಕೆಲಸ ಇದು. ಏಕಾಂಗಿಯಾಗಿ ವಾಸಿಸುತ್ತಿದ್ದ ಮಹದೇವ ಎಂಬುವವರು ಕೊರೊನಾದಿಂದ ಮೃತಪಟ್ಟಿದ್ದರು. ಅವರ ಹೊಲದಲ್ಲಿ ಅಂತಿಮ ಸಂಸ್ಕಾರ ಮಾಡುವುದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಕೊನೆಗೆ ಪಿಎಫ್‌ಐ ಕಾರ್ಯಕರ್ತರು ಕೊಳ್ಳೇಗಾಲ ತಾ. ಆಲದಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಮನೆಯವರಿಗೆ ಕೊರೊನಾ ಬರುತ್ತದೆಂದು ಹೆದರಿ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ