Asianet Suvarna News

ಚಾಮರಾಜನಗರ ಆಕ್ಸಿಜನ್ ದುರಂತ: ಕಚೇರಿ ಲಾಕ್, ದೂರು ಕೊಡಲು ಹೋದ ಬಿಜೆಪಿ ನಾಯಕ ವಾಪಸ್

Jun 19, 2021, 8:15 PM IST

 ಮೈಸೂರು, (ಜೂನ್.19): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  ಮೇ 2 ರ ಮಧ್ಯರಾತ್ರಿ ಸಂಭವಿಸಿದ್ದ 24 ಜನರ ಸಾವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬರೋಬ್ಬರಿ 24  ಜೀವಗಳ ಬಲಿಯಾಗಿದ್ದು, ಈ ಪ್ರಕರಣ ನ್ಯಾಯಾಂಗ ತನಿಖೆಯಾಗುತ್ತಿದೆ.

ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮೇಜರ್ ಟ್ವಿಸ್ಟ್ : ರೋಹಿಣಿ ಸಿಂಧೂರಿ ಬಗ್ಗೆ ಸಿಂಹ ಆರೋಪ..?

ಇದರ ಮಧ್ಯೆ ಚಾಮರಾಜನಗರ ಬಿಜೆಪಿ ರೈತ ಮುಖಂಡ ಮಲ್ಲೇಶ್ ಎನ್ನುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು  ಬಂದಿದ್ದಾರೆ. ಆದ್ರೆ, ಆಯೋಗದ ಕಚೇರಿಗೆ ಬೀಗ ಹಾಕಿದ್ದು, ಸಮಾಧಾನಕ್ಕೆ ಕಾರಣವಾಗಿದೆ.