Asianet Suvarna News Asianet Suvarna News

ಇಂದು 50 ವರ್ಷದ ಹಳೆ ಕೆಎಂಎಫ್ ಕ್ವಾರ್ಟರ್ಸ್ ಕುಸಿತ

ಡೈರಿ ಸರ್ಕಲ್ ಬಳಿ ಕೆಎಂಎಫ್ ಕ್ವಾರ್ಟರ್ಸ್‌ ಬಳಿ 50 ವರ್ಷದ ಹಳೆಯ ಮನೆಯೊಂದು ಇಂದು ಕುಸಿದು ಬಿದ್ದಿದೆ. ಮನೆ ಶಿಥಿಲಾವಸ್ಥೆಯಲ್ಲಿದ್ದರಿಂದ ಯಾರೂ ಅಲ್ಲಿ ವಾಸವಾಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

Sep 28, 2021, 12:01 PM IST

ಬೆಂಗಳೂರು (ಸೆ. 28): ಡೈರಿ ಸರ್ಕಲ್ ಬಳಿ ಕೆಎಂಎಫ್ ಕ್ವಾರ್ಟರ್ಸ್‌ ಬಳಿ 50 ವರ್ಷದ ಹಳೆಯ ಮನೆಯೊಂದು ಇಂದು ಕುಸಿದು ಬಿದ್ದಿದೆ. ಮನೆ ಶಿಥಿಲಾವಸ್ಥೆಯಲ್ಲಿದ್ದರಿಂದ ಯಾರೂ ಅಲ್ಲಿ ವಾಸವಾಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಲಕ್ಕಸಂದ್ರ ಕಟ್ಟಡ ಕುಸಿತ: ಮಾಲಿಕ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲು

ಬಿಬಿಎಂಪಿ ವ್ಯಾಪ್ತಿಯಲ್ಲಿ 194 ಬಿಲ್ಡಿಂಗ್‌ಗಳು ಕುಸಿಯುವ ಹಂತದಲ್ಲಿದೆ. ನಿನ್ನೆ ಲಕ್ಕಸಂದ್ರದ ಬಳಿ 3 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಕುಸಿಯುವಾಗ ಯಾರೂ ಇಲ್ಲದೇ ಇದ್ದುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.