ಯಡಿಯೂರಪ್ಪ ಸಿಎಂ ಅಷ್ಟೇ, ಮೋದಿ ನಮ್ಮ ನಾಯಕ! ಏನೀ ಯತ್ನಾಳ್ ಮಾತಿನ ಮರ್ಮ?
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುತೂಹಲ ಮೂಡಿಸಿದೆ. ' ಯಡಿಯೂರಪ್ಪನವರನ್ನು ಬದಲಿಸೋಣ ಅಂತ ಹೈಕಮಾಂಡ್ ಹೇಳಿದ್ರೂ ಓಕೆ, ಅವರೇ ಮುಂದುವರೆಯಲಿ ಅಂದ್ರೂ ಓಕೆ. ಹೈ ಕಮಾಂಡ್ ತೀರ್ಮಾನಕ್ಕೆ ತಲೆ ಬಾಗುತ್ತೇವೆ' ಎಂದಿದ್ದಾರೆ.
ಬೆಂಗಳೂರು (ಮೇ. 29): ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುತೂಹಲ ಮೂಡಿಸಿದೆ. ಯಡಿಯೂರಪ್ಪನವರನ್ನು ಬದಲಿಸೋಣ ಅಂತ ಹೈಕಮಾಂಡ್ ಹೇಳಿದ್ರೂ ಓಕೆ, ಅವರೇ ಮುಂದುವರೆಯಲಿ ಅಂದ್ರೂ ಓಕೆ. ಹೈ ಕಮಾಂಡ್ ತೀರ್ಮಾನಕ್ಕೆ ತಲೆ ಬಾಗುತ್ತೇವೆ ಎಂದಿದ್ದಾರೆ.
ಯತ್ನಾಳ್ ಅಲ್ಲ, ಕತ್ತಿಯೂ ಅಲ್ಲ, ಬಿಜೆಪಿ ಬಂಡಾಯಕ್ಕೆ ಈ ವ್ಯಕ್ತಿಯೇ ಮೂಲ ಕಾರಣ!
ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ. ನನ್ನ ನಾಯಕ ಪ್ರಧಾನಿ ಮೋದಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಯಾರ ಮುಂದೆಯೂ ಕೈ ಕಟ್ಟಿ ನಿಲ್ಲುವ ಶಾಸಕ ನಾನಲ್ಲ. ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟರೂ ಬೇಡ' ಎಂದಿದ್ದಾರೆ. ಹಾಗಾದರೆ ಯತ್ನಾಳ್ ಮಾತಿನ ಮರ್ಮವೇನು? ಇಲ್ಲಿದೆ ನೋಡಿ..!