ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ: ಶಾಂತರಾಮ್ ಸಿದ್ದಿ
ಬುಡಕಟ್ಟು ಸಮುದಾಯಕ್ಕೆ ಸೇರಿದ ಶಾಂತರಾಮ್ ಸಿದ್ದಿ ಅವರನ್ನು ಬಿಜೆಪಿ ಈ ಬಾರಿ ವಿಧಾನಪರಿಷತ್‌ಗೆ ಆಯ್ಕೆ ಮಾಡಿದೆ. ಈ ಕುರಿತಂತೆ ಶಾಂತರಾಮ್ ಸಿದ್ದಿ ಸುವರ್ಣ ನ್ಯೂಸ್ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ(ಜು.25): ಕೆಲ ತಿಂಗಳ ಹಿಂದಷ್ಟೇ ರಾಜ್ಯಸಭೆಗೆ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಮತ್ತೆ ವಿಧಾನಪರಿಷತ್‌ಗೂ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡಿದೆ.
ಹೌದು, ಬುಡಕಟ್ಟು ಸಮುದಾಯಕ್ಕೆ ಸೇರಿದ ಶಾಂತರಾಮ್ ಸಿದ್ದಿ ಅವರನ್ನು ಬಿಜೆಪಿ ಈ ಬಾರಿ ವಿಧಾನಪರಿಷತ್‌ಗೆ ಆಯ್ಕೆ ಮಾಡಿದೆ. ಈ ಕುರಿತಂತೆ ಶಾಂತರಾಮ್ ಸಿದ್ದಿ ಸುವರ್ಣ ನ್ಯೂಸ್ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮುನಿರತ್ನ ಬರ್ತ್‌ಡೇ ವಿಶ್‌ಗೆ ಆಕ್ಷೇಪ: ಇದು ರಾಜಕೀಯದ ಸತ್ಸಂಪ್ರದಾಯ ಎಂದ ನಿಖಿಲ್
ನಾನು ಸಂಘ ಪರಿವಾರದ ಹಿನ್ನೆಲೆಯಲ್ಲಿ ಬೆಳೆದವನು. ಸಂಘದ ಕಾರ್ಯಕರ್ತರು ಒಳ್ಳೆಯ ಕೆಲಸಕ್ಕೆ ಯಾವಾಗಲೂ ತಯಾರಾಗಿರುತ್ತೇವೆ. ನಮ್ಮ ಕೆಲಸವನ್ನು ಗುರುತಿಸಿ ಪಕ್ಷ ಈ ಅವಕಾಶವನ್ನು ನೀಡಿದೆ ಎಂದು ಭಾವಿಸುತ್ತೇನೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಬುಡಕಟ್ಟು ಜನಾಂಗದ ವಿಕಾಸವೇ ತಮ್ಮ ಮೂಲಗುರಿ ಎಂದು ಶಾಂತರಾಮ್ ಸಿದ್ದಿ ಪುನರುಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.