ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು ಜೈನಮುನಿ ಹತ್ಯೆ: ಐಸಿಸ್ ಶಂಕೆ..ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ..!
ರಾಜ್ಯದಲ್ಲಿ ಭಯದ ವಾತಾವರಣ ಸಷ್ಠಿಯಾಗಿದೆ" ಶಾಸಕ ಯತ್ನಾಳ್..!
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಬಿಜೆಪಿ ಒಕ್ಕೊರಲ ಮನವಿ
ಕೊಲೆಗಡುಕರನ್ನು ಎನ್‌ಕೌಂಟರ್ ಮಾಡಿ ಅಂದ್ರು ಬಿಜೆಪಿ ಶಾಸಕ..!
ಜೈನಮುನಿ ಹತ್ಯೆ ನಂತರ ಚಿಕ್ಕೋಡಿಯ ಹಿರೇಕೋಟಿ ಗ್ರಾಮದ ನಂದಿಪರ್ವತ ಆಶ್ರಮಕ್ಕೆ ಹೋಗಿ ಬಂದಿರೋ ಬಿಜೆಪಿ ಶಾಸಕ ಸಿದ್ದು ಸವದಿ(Siddu savadi), ಆ ಡೆಲ್ಲಿ ಮರ್ಡರ್ ಹಿಂದೆ ಹತ್ತಾರು ಆಯಾಮಗಳ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. ಇದ್ರ ಹಿಂದೆ ಖಂಡಿತಾ ಹಿಡನ್ ಅಜೆಂಡಾ ಇದ್ದು, ದೊಡ್ಡ ಪಿತೂರಿಯೇ ಅಡಗಿದೆ ಅಂತ ಸ್ಫೋಟಕ ಆರೋಪ ಮಾಡಿದ್ದಾರೆ.ಜೈನಮುನಿ ಹತ್ಯೆ(Jain Muni murder) ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ(BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹತ್ಯೆ ಇಡೀ ರಾಜ್ಯಕ್ಕೇ ಕಳಂಕ, ಇದ್ರಿಂದ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಬೇರೆಯೇ ಕಥೆ ಕಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಜೈನಮುನಿ ಹತ್ಯೆಯ ಹಿಂದೆ ಐಸಿಸ್ ಕೈವಾಡವಿರಬಹುದು ಅನ್ನೋದು ಬಿಜೆಪಿ ಶಾಸಕ ಸಿದ್ದು ಸವದಿ ಅವರ ಅನುಮಾನ ಮತ್ತು ಆರೋಪ. ಇದ್ರ ಬಗ್ಗೆ ಪ್ರತಿಕ್ರಿಯಿಸಿರೋ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯರು ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ, ಪಕ್ಕಾ ಮಾಹಿತಿ ಇದ್ರೆ ತನಿಖಾಧಿಕಾರಿಗಳಿಗೆ ಕೊಡ್ಲಿ ಅಂದಿದ್ದಾರೆ.
ಇದನ್ನೂ ವೀಕ್ಷಿಸಿ: ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ: ರಾಜಧಾನಿ ಸುತ್ತುವರಿದ ಯಮುನಾ..!