BIG 3 Impact : ತುಮಕೂರು ಕೈಮರ ಸ್ಮಶಾನ ಸಂಕಟಕ್ಕೆ ಮುಕ್ತಿ
ತುಮಕೂರಿನ ಕೊರಟಗೆರೆ ತಾಲೂಕಿನ ಕೈಮರ ಗ್ರಾಮದಲ್ಲಿಎತ್ತಿನ ಹೊಳೆ ಯೋಜನೆ ಮಾಡುವಾಗ ಬಂಡೆ ಬ್ಲಾಸ್ಟ್‌ನಿಂದ ಉಸಿರಾಟದ ತೊಂದರೆಯಾಗಿ ಮಗುವೊಂದು ಅಸು ನೀಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರು (ಮಾ. 26): ತುಮಕೂರಿನ ಕೊರಟಗೆರೆ ತಾಲೂಕಿನ ಕೈಮರ ಗ್ರಾಮದಲ್ಲಿಎತ್ತಿನ ಹೊಳೆ ಯೋಜನೆ ಮಾಡುವಾಗ ಬಂಡೆ ಬ್ಲಾಸ್ಟ್‌ನಿಂದ ಉಸಿರಾಟದ ತೊಂದರೆಯಾಗಿ ಮಗುವೊಂದು ಅಸು ನೀಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇನ್ನೂ ಅಮಾನವೀಯ ಏನಂದರೆ ಮಗುವನ್ನು ಮಣ್ಣು ಮಾಡಿದ ಬಳಿಕ, ಅದು ದಲಿತ ಮಗುವೆಂದು, ಅದನ್ನು ಹೊರತೆಗೆಸಲಾಯ್ತು. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿದ ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪೋಷಕರಿಗೆ ಸಮಾಧಾನಪಡಿಸಿದ್ದಾರೆ. ಸ್ಮಶಾನಕ್ಕೆ 1 ಎಕರೆ ಜಾಗ ಗುರುತುಪಡಿಸಿದ್ದಾರೆ.
ಇದೇನಿದು ಅಮಾನವೀಯತೆ : ಜಾಗಕ್ಕಾಗಿ ಹೂತ ಮಗುವಿನ ಶವ ಮತ್ತೆ ತೆಗೆಸಿದ್ರು