ಶಿವಮೊಗ್ಗ ಮಳಿಗೆ ಸಮಸ್ಯೆ ಬಗ್ಗೆ ಬಿಗ್ 3 ವರದಿ, ಅಧಿಕಾರಿಗಳಿಂದ 15 ದಿನಗಳಲ್ಲಿ ಮಳಿಗೆ ಹಂಚಿಕೆ ಭರವಸೆ
2019 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು (BS Yediyurappa) ಬೆಂಗಳೂರಿನಿಂದ ಶಿವಮೊಗ್ಗಕ್ಕೆ (shivamogga) ಆಗಮಿಸಿದ್ದರು. ಆಗ ತಮ್ಮ ವಿನೋಬಾ ನಗರ ನಿವಾಸಕ್ಕೆ ಹೊರಟಿದ್ದರು. ಆಗ ಲಕ್ಷ್ಮೀ ಟಾಕೀಸ್‌ನಿಂದ ವಿನೋಬಾ ನಗರದವರೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವವರನ್ನು ಕಂಡು ಅವರಿಗೆ ಸೂಕ್ತ ಕಟ್ಟಡ ಕಟ್ಟಿಕೊಡುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸುತ್ತಾರೆ.
ಶಿವಮೊಗ್ಗ (ಜೂ.02): 2019 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು (BS Yediyurappa) ಬೆಂಗಳೂರಿನಿಂದ ಶಿವಮೊಗ್ಗಕ್ಕೆ (shivamogga) ಆಗಮಿಸಿದ್ದರು. ಆಗ ತಮ್ಮ ವಿನೋಬಾ ನಗರ ನಿವಾಸಕ್ಕೆ ಹೊರಟಿದ್ದರು. ಆಗ ಲಕ್ಷ್ಮೀ ಟಾಕೀಸ್‌ನಿಂದ ವಿನೋಬಾ ನಗರದವರೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವವರನ್ನು ಕಂಡು ಅವರಿಗೆ ಸೂಕ್ತ ಕಟ್ಟಡ ಕಟ್ಟಿಕೊಡುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸುತ್ತಾರೆ. ವಿನೋಬಾನಗರದ ಶಿವಾಲಯ ಪಕ್ಕ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡುತ್ತಾರೆ. 2 ವರ್ಷಗಳಲ್ಲಿ ಕಾಮಗಾರಿಯನ್ನೂ ಮುಕ್ತಾಯಗೊಳಿಸಲಾಗಿದೆ. ಆದರೂ ಇನ್ನೂ ಮಳಿಗೆ ಹಂಚಿಕೆಯಾಗಿಲ್ಲ. ಈ ಬಗ್ಗೆ ಶಿವಮೊಗ್ಗ ಶಾಸಕ ಈಶ್ವರಪ್ಪನವರ ಗಮನಕ್ಕೆ ತಂದಾಗ, ಕೂಡಲೇ ಹಂಚಿಕೆ ಮಾಡುವ ಭರವಸೆ ನೀಡಿದರು.
ಪ್ರಶಾಂತ್ ಹತ್ಯೆಯಲ್ಲಿ ಸಿಪಿಐ ರೇಣುಕಾ ಪ್ರಸಾದ್ ಕೈವಾಡ? ರೇವಣ್ಣ ಗಂಭೀರ ಆರೋಪ
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ 15 ದಿನದೊಳಗೆ ಮಳಿಗೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು. ಇದು ಬಿಗ್ 3 ಇಂಪ್ಯಾಕ್ಟ್.