Asianet Suvarna News Asianet Suvarna News

ಯುವತಿ, ಮೂವರು ಮಕ್ಕಳು ನಾಪತ್ತೆ, ಮೊಬೈಲ್ ಸ್ವಿಚ್‌ ಆಫ್, ಫೇಸ್‌ಬುಕ್ ಅಕೌಂಟ್ ಡಿಲೀಟ್!

Oct 11, 2021, 1:44 PM IST

ಬೆಂಗಳೂರು (ಅ. 11): ಎಜಿ​ಬಿ ಲೇಔ​ಟ್‌ನ ಕ್ರಿಸ್ಟಲ್‌ ಅಪಾ​ರ್ಟ್‌​ಮೆಂಟ್‌ನ 21 ವರ್ಷದ ಬಿಸಿಎ ವಿದ್ಯಾರ್ಥಿ ಸೇರಿ ನಾಲ್ವರು ಮಕ್ಕಳು ನಿಗೂ​ಢ​ವಾಗಿ ನಾಪ​ತ್ತೆ​ಯಾ​ಗಿ​ದ್ದಾರೆ. ಖಾಸಗಿ ಕಾಲೇ​ಜಿ​ನಲ್ಲಿ ಬಿಸಿಎ ಮೂರನೇ ಸೆಮಿ​ಸ್ಟ​ರ್‌​ನಲ್ಲಿ ವ್ಯಾಸಂಗ ಮಾಡು​ತ್ತಿ​ರು​ವ ಅಮೃತ ವರ್ಷಿ​ಣಿ​(21) ಮತ್ತು ರಾಯನ್‌ ಸಿದ್ಧಾ​ಥ್‌ರ್‍​(12), ಚಿಂತ​ನ್‌​(12), ಭೂಮಿ​(12) ನಾಪ​ತ್ತೆ​ಯಾ​ಗಿ​ದ್ದಾ​ರೆ. ಅಮೃತ ವರ್ಷಿಣಿ ಮೊಬೈಲ್ ಸ್ವಿಚ್ ಆಗಿದೆ. ಫೇಸ್‌ಬುಕ್ ಅಕೌಂಟ್ ಕೂಡಾ ಡಿಲೀಟ್ ಮಾಡಿದ್ದಾಳೆ. 

ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳ ಪತ್ತೆ ಮಾಡಿದ ಪೊಲೀಸರು

ಭಾನು​ವಾರ ಬೆಳಗ್ಗೆ ನಾಲ್ವರು ಪೋಷ​ಕ​ರಿಗೆ ಮಾಹಿತಿ ನೀಡದೆ ಮನೆ​ಯಿಂದ ಹೋಗಿ​ದ್ದಾರೆ. ಎಲ್ಲೆಡೆ ಹುಡು​ಕಾಟ ನಡೆ​ಸಿ​ದರೂ ಪತ್ತೆ​ಯಾ​ಗಿಲ್ಲ. ಈ ಮಧ್ಯೆ ಮನೆ​ಗ​ಳಲ್ಲಿ ಚೀಟಿ​ಯೊಂದು ಪತ್ತೆ​ಯಾ​ಗಿದೆ. ಈ ಚೀಟಿ​ಯಲ್ಲಿ ಚಪ್ಪಲಿ, ಬ್ರಷ್‌, ಟೂತ್‌​ಪೇಸ್ಟ್‌, ನೀರಿನ ಬಾಟಲ್‌, ನಗದು ಮತ್ತು ಕ್ರೀಡೆ ವಸ್ತು​ಗಳು ಹಾಗೂ ಇತರೆ ವಸ್ತು​ಗ​ಳ​ನ್ನು​ ಕೊಂಡೊ​ಯ್ಯ​ಬೇ​ಕೆಂದು ಪಟ್ಟಿ​ಯಲ್ಲಿ ಉಲ್ಲೇಖಿ​ಸ​ಲಾ​ಗಿದೆ. ಮೂವರು ಮಕ್ಕಳು ಯಾವಾ​ಗಲೂ ಅಮೃ​ವ​ರ್ಷಿಣಿ ಜತೆಯೇ ಹೆಚ್ಚು ಸಮಯ ಕಳೆ​ಯು​ತ್ತಿ​ದ್ದರು. ಹೀಗಾಗಿ ಆಕೆಯೇ ಮಕ್ಕ​ಳನ್ನು ಕರೆ​ದೊ​ಯ್ದಿ​ರುವ ಸಾಧ್ಯ​ತೆ​ಗ​ಳಿವೆ. ಈ ಸಂಬಂಧ ಸೋಲ​ದೇ​ವ​ನ​ಹಳ್ಳಿ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿದ್ದು, ಶೋಧ ಕಾರ್ಯ ಮುಂದು​ವ​ರಿ​ದಿದೆ ಎಂದು ಪೊಲೀ​ಸರು ಹೇಳಿ​ದ​ರು.