Asianet Suvarna News Asianet Suvarna News

News Hour: ಬೆಂಗಳೂರು ಜನರಿಗೆ ಕಳಪೆ ಮಟನ್‌, ಅಬ್ದುಲ್ ರಜಾಕ್​ಗೆ ಕಮಿಷನ್..?

 ಬೆಂಗಳೂರು ಮಟನ್ ಮಾಫಿಯಾ ಸೀಕ್ರೆಟ್​ ಬಯಲಾಗಿದೆ. ಪ್ರತಿ ಬಾಕ್ಸ್​ಗೂ ಅಬ್ದುಲ್​ ರಜಾಕ್​ಗೆ​ ಕಮೀಷನ್‌ ಸಿಗಲಿದೆ ಎನ್ನುವ ಆರೋಪವೂ ಇದೆ. ಮಾಂಸ ದಂಧೆ ವಿರುದ್ಧ ದೂರು ಕೊಟ್ಟವರೇ ಟಾರ್ಗೆಟ್ ಈಗ ಟಾರ್ಗೆಟ್‌ ಆಗಿದ್ದಾರೆ.
 

First Published Jul 27, 2024, 11:08 PM IST | Last Updated Jul 27, 2024, 11:08 PM IST

ಬೆಂಗಳೂರು (ಜು.27): ಬೆಂಗಳೂರು ಮಟನ್‌ ಮಾಫಿಯಾ ಸದ್ದು ಮಾಡುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಸಾಗಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ರಾಜಸ್ಥಾನದ ಶಿಖರ್ ಜಿಲ್ಲೆಯಿಂದ ಬೆಂಗಳೂರಿಗೆ ಮಾಂಸ ರವಾನೆ ಆಗುತ್ತಿತ್ತು.

ರಾಜಸ್ಥಾನದ ಶಿಖರ್​ ಜಿಲ್ಲೆಯಲ್ಲಿರುವ ಗೋಡೌನ್​ನಿಂದ ಜೈಪುರ ರೈಲ್ವೆ ನಿಲ್ದಾಣಕ್ಕೆ ಕನಿಷ್ಠ 2 ಗಂಟೆ ಪ್ರಯಾಣದ ಬಳಿಕ ರೈಲಿಗೆ ಲೋಡ್‌ ಆಗುತ್ತಿತ್ತು. ಜೈಪುರ ರೈಲ್ವೆ ನಿಲ್ದಾಣದಿಂದ ಗೂಡ್ಸ್​ ಅಥವಾ ಪ್ಯಾಸೆಂಜರ್‌ ​ರೈಲ್ವೆ ಮೂಲಕ ಬೆಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಜೈಪುರದಿಂದ ಬೆಂಗಳೂರಿಗೆ ಟ್ರೈನ್ ಬರಲು 40-45 ಗಂಟೆ ಬೇಕಿದೆ. ಆ ಬಳಿಕ ಬೆಂಗಳೂರು ರೈಲು ನಿಲ್ದಾಣದಿಂದ ಶಿವಾಜಿನಗರಕ್ಕೆ ಮಾಂಸ ಶಿಫ್ಟ್ ಆಗುತ್ತಿತ್ತು.

ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?

ಈ ಮಾಂಸ ದಂಧೆಯಲ್ಲಿ ಅಬ್ದುಲ್​ ರಜಾಕ್​ಗೆ ಒಂದು ಬಾಕ್ಸ್​ಗೆ 500 ರೂಪಾಯಿಯಂತೆ ಕಮೀಷನ್‌ ಸಿಗುತ್ತಿತ್ತು. ಒಂದು ಬಾಕ್ಸ್​ನಲ್ಲಿ​ 50 ರಿಂದ 60 ಕೆಜಿ ಕುರಿ ಮಾಂಸ ಸಾಗಿಸಲಾಗುತ್ತದೆ. ಜೈಪುರದಿಂದ ತಂದು ಬೆಂಗಳೂರಲ್ಲಿ ಮಾರಿದರೆ, 30 ಸಾವಿರ ವ್ಯವಹಾರ ಆಗತ್ತಿತ್ತು.