ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಹಕರಿಸಿ : ಸಿಎಂ ಮನವಿ

'ಸಾರ್ವಜನಿಕ ಬಂಧುಗಳೇ, ಕೊರೋನಾ ಅಪಾಯ ಇನ್ನೂ ತಗ್ಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಸಾಂಕ್ರಾಮಿಕದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ, ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಹಕರಿಸಿ, ಸುರಕ್ಷಿತವಾಗಿರಿ' ಎಂದು ಸಿಎಂ ಮನವಿ ಮಾಡಿದ್ಧಾರೆ. 

First Published Dec 30, 2020, 1:17 PM IST | Last Updated Dec 30, 2020, 1:27 PM IST

ಬೆಂಗಳೂರು (ಡಿ. 30): ಬ್ರಿಟನ್‌ನ ರೂಪಾಂತರಿ ವೈರಸ್ ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ 3, ಶಿವಮೊಗ್ಗದಲ್ಲಿ 4 ಕೇಸ್‌ಗಳು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ನಿಜಕ್ಕೂ ಈ ವೈರಸ್ ಅತಂಕ ಮೂಡಿಸುತ್ತಿದೆ. ಹಾಗಾಗಿ ಮುನ್ನಚ್ಚರಿಕೆ ವಹಿಸಿಸುವುದು ಅಗತ್ಯವಾಗಿದೆ. ಸಿಎಂ ಬಿಎಸ್‌ವೈ ಕೂಡಾ ರಾಜ್ಯದ ಜನರಲ್ಲಿ ಮುನ್ನೆಚ್ಚರಿಕೆ ಬಗ್ಗೆ ಮನವಿ ಮಾಡಿದ್ದಾರೆ. 

ರಾಜ್ಯದಲ್ಲಿ 7 ಮಂದಿಗೆ ಬ್ರಿಟನ್ ವೈರಸ್ ಸೋಂಕು, ಮತ್ತೆ ಸೀಲ್‌ಡೌನ್/ ಲಾಕ್‌ಡೌನ್ ಆಗುತ್ತಾ..?

'ಸಾರ್ವಜನಿಕ ಬಂಧುಗಳೇ, ಕೊರೋನಾ ಅಪಾಯ ಇನ್ನೂ ತಗ್ಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಸಾಂಕ್ರಾಮಿಕದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ, ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಹಕರಿಸಿ, ಸುರಕ್ಷಿತವಾಗಿರಿ' ಎಂದು ಮನವಿ ಮಾಡಿದ್ದಾರೆ.