ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳಗಳೆಲ್ಲಾ ತುಂಬಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸುಬ್ರಹ್ಮಣ್ಯ ಹರಿಹರ ದಲ್ಲಿ ಪ್ರವಾಹ ಸ್ಥಳದಲ್ಲಿ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ನೀರಿಗೆ ಬೀಳುತ್ತಾರೆ. 

First Published Aug 3, 2022, 3:55 PM IST | Last Updated Aug 3, 2022, 4:36 PM IST

ಮಂಗಳೂರು (ಆ. 03): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳಗಳೆಲ್ಲಾ ತುಂಬಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸುಬ್ರಹ್ಮಣ್ಯ ಹರಿಹರ ದಲ್ಲಿ ಪ್ರವಾಹ ಸ್ಥಳದಲ್ಲಿ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ನೀರಿಗೆ ಬೀಳುತ್ತಾರೆ. 

ಫಾಝಿಲ್ ಹತ್ಯೆ: ತನಿಖೆಯಲ್ಲಿ ಲವ್ ಆಫೇರ್ ಅಂಶ ಕಂಡು ಬಂದಿಲ್ಲ: ಮಂಗಳೂರು ಕಮಿಷನರ್ ಶಶಿಕುಮಾರ್ ಸ್ಪಷ್ಟನೆ

ಆಗ ಅಲ್ಲಿದ್ದವರೆಲ್ಲಾ ಭಯದಿಂದ ಕೂಗುತ್ತಾರೆ. ಆಗ ಅಲ್ಲಿಯೇ ಇದ್ದ ಸೋಮಶೇಖರ್ ಕಟ್ಟೆಮನೆ ಎಂಬ ಯುವಕ ಅಪಾಯ ಲೆಕ್ಕಿಸದೇ ನದಿಗೆ ಹಾರಿ ಶರೀಫ್‌ನನ್ನು ರಕ್ಷಿಸುತ್ತಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಅಪ್‌ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 

ದಕ್ಷಿಣ ಕನ್ನಡ ದಲ್ಲಿ ಕೋಮು ಗಲಭೆಯಿಂದ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯಲ್ಲಿಯೂ ಅನ್ಯದರ್ಮದ ಯುವಕನನ್ನು ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
 

Video Top Stories