Tumakuru Bus Accident: ನಿಧಾನವಾಗಿ ಓಡಿಸಲು ಹೇಳಿದರೂ ಕೇಳದ ಚಾಲಕನಿಂದ ಅವಘಡ

ಮಿತಿ​ಗಿಂತ ಹೆಚ್ಚಿನ ಜನ​ರನ್ನು ಹೇರಿ​ಕೊಂಡು ವೇಗ​ವಾಗಿ ಸಾಗು​ತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿ​ಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಬಳಿ ಶನಿ​ವಾರ ಬೆಳಗ್ಗೆ ನಡೆದಿದೆ.

First Published Mar 20, 2022, 10:07 AM IST | Last Updated Mar 20, 2022, 10:52 AM IST

 ಪಾವಗಡ (ಮಾ. 20):  ಮಿತಿ​ಗಿಂತ ಹೆಚ್ಚಿನ ಜನ​ರನ್ನು ಹೇರಿ​ಕೊಂಡು ವೇಗ​ವಾಗಿ ಸಾಗು​ತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿ​ಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಬಳಿ ಶನಿ​ವಾರ ಬೆಳಗ್ಗೆ ನಡೆದಿದೆ. ಈ ಭೀಕರ ಅಪ​ಘಾ​ತ​ದಲ್ಲಿ 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯ​ಗೊಂಡಿ​ದ್ದಾ​ರೆ.

Bengaluru:ಆಟೋ ಡ್ರೈವರ್ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಸಾವು

ಜಿಲ್ಲೆಯ ಸೂಲನಾಯಕನಹಳ್ಳಿಯ ಅಮೂಲ್ಯ(16), ಅಜಿತ್‌ (18), ಬೆಸ್ತರಹಳ್ಳಿಯ ಶಹನವಾಜ್‌ (18), ವೈ.ಎನ್‌.ಹೊಸಕೋಟೆಯ ಕಲ್ಯಾಣ್‌(18), ದಾದು​ವ​ಲ್ಲಿ​(26), ಹೃಷಿ​ಕಾ​(21) ಮೃತರು. ಘಟನೆಗೆ ಸಂಬಂಧಿಸಿ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪ​ಘಾತಕ್ಕೂ ಮೊದಲು ನಿಲ್ದಾ​ಣ​ವೊಂದ​ರಲ್ಲಿ ಕೆಲ​ವರು ಚಾಲ​ಕ​ನಿಗೆ ಮಿತಿ​ಮೀ​ರಿದ ವೇಗ​ದಲ್ಲಿ ಬಸ್‌ ಓಡಿ​ಸ​ದಂತೆ ಮನ​ವಿ​ಯನ್ನೂ ಮಾಡಿ​ಕೊಂಡಿ​ದ್ದರು ಎನ್ನ​ಲಾ​ಗಿದೆ. ಆದರೂ ಇದನ್ನು ಕಿವಿಗೆ ಹಾಕಿ​ಕೊ​ಳ್ಳದ ಚಾಲಕ ತಿರು​ವಿ​ನಲ್ಲೂ ವೇಗ​ವಾಗಿ ಬಸ್‌ ಓಡಿ​ಸಿ​ದ್ದ​ರಿಂದ ಈ ದುರಂತ ಸಂಭ​ವಿ​ಸಿದೆ ಎಂದು ಬಸ್‌​ನ​ಲ್ಲಿದ್ದ ಪ್ರಯಾ​ಣಿ​ಕರೇ ಆರೋ​ಪಿ​ಸಿ​ದ್ದಾ​ರೆ.

Video Top Stories