Bengaluru: ಆಟೋ ಡ್ರೈವರ್ ನಿರ್ಲಕ್ಷಕ್ಕೆ 5 ವರ್ಷದ ಮಗು ಸಾವು

ಗೂಡ್ಸ್‌ ಆಟೋ ಚಕ್ರ ಹರಿದು ಐದು ವರ್ಷ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 

First Published Mar 20, 2022, 10:39 AM IST | Last Updated Mar 20, 2022, 10:54 AM IST

ಬೆಂಗಳೂರು (ಮಾ. 20): ಗೂಡ್ಸ್‌ ಆಟೋ ಚಕ್ರ ಹರಿದು ಐದು ವರ್ಷ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tumakuru Bus Accident:ನಿಧಾನವಾಗಿ ಓಡಿಸಲು ಹೇಳಿದರೂ ಕೇಳದ ಚಾಲಕನಿಂದ ಅವಘಡ

ಕಾಮಾಕ್ಷಿಪಾಳ್ಯ ಕಾವೇರಿಪುರದ ನಿವಾಸಿ ಭುವನಾ (5) ಮೃತ ಬಾಲಕಿ. ಮಾ.17ರಂದು ಬೆಳಗ್ಗೆ 10.30ರ ಸುಮಾರಿಗೆ ಕಾವೇರಿಪುರದ 2ನೇ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಭುವನಾ ಹಾಗೂ ಅವರ ತಾಯಿ ಅನಿತಾ ಅವರು ರಸ್ತೆ ಬದಿ ಸೈಕಲ್‌ನಲ್ಲಿ ಮಾರಾಟ ಮಾಡುವ ಎಳೆನೀರು ಕುಡಿಯುತ್ತಿದ್ದರು. ಈ ವೇಳೆ ಗ್ಯಾಸ್‌ ಸಿಲಿಂಡರ್‌ ತುಂಬಿದ್ದ ಆಟೋವೊಂದು ಪಟ್ಟೇಗಾರಪಾಳ್ಯ ಕಡೆಯಿಂದ ಅದೇ ಮಾರ್ಗದಲ್ಲಿ ಬಂದಿದೆ. ಈ ವೇಳೆ ಆಟೋ ಚಾಲಕ ಆಟೋ ನಿಲ್ಲಿಸಿಕೊಂಡು ಮಹಿಳೆಯೊಬ್ಬರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾನೆ. ಈ ವೇಳೆ ಆಟೋ ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೆ ಆಟೋದಿಂದ ಕೆಳಗೆ ಇಳಿದಿದ್ದಾನೆ. ರಸ್ತೆ ಕೊಂಚ ಇಳಿಜಾರು ಇದ್ದಿದ್ದರಿಂದ ಆಟೋ ಮುಂದಕ್ಕೆ ಚಲಿಸಿದೆ. ಈ ವೇಳೆ ಎದುರಿಗೇ ನಿಂತಿದ್ದ ಬಾಲಕಿ ಭುವನಾ ಹಾಗೂ ಅನಿತಾ ಅವರಿಗೆ ಆಟೋ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದಿದ್ದ ಭುವನಾಳನ್ನು ತಾಯಿ ಎಳೆದುಕೊಳ್ಳಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವೇಳೆ ಆಟೋ ಚಕ್ರ ಭುವನಾಳ ಕುತ್ತಿಗೆ ಮೇಲೆ ಹರಿದಿದೆ.

Video Top Stories