BBMP ಅಧಿಕಾರಿಯ ಪತ್ನಿಗೂ ಅಂಟಿದ ಕೊರೋನಾ ಸೋಂಕು..!
ಬೆಂಗಳೂರಿನ ಶ್ರೀರಾಂಪುರದ ನಿವಾಸಿ ಮಹಿಳೆಗೆ ಕೋವಿಡ್ 19 ತಗುಲಿರುವುದು ಖಚಿತವಾಗಿದೆ. ಬಿಬಿಎಂಪಿ ಅಧಿಕಾರಿಯ ಪತ್ನಿ ಈಗಾಗಲೇ ಕ್ಯಾನ್ಸರ್ ರೋಗದಿಂದ ಬಳಲುತಿದ್ದರು. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಅವರಿಗೆ ಕೊರೋನಾ ತಗುಲಿದೆ.
ಬೆಂಗಳೂರು(ಮೇ.31): ಕೊರೋನಾ ವೈರಸ್‌ಗೆ ಬಡವ ಶ್ರೀಮಂತನೆಂಬ ಬೇಧವಿಲ್ಲ. ಇದೀಗ ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಯ ಪತ್ನಿಗೂ ಸೋಂಕು ತಗಲಿರುವುದು ದೃಢಪಟ್ಟಿದೆ.
ಬೆಂಗಳೂರಿನ ಶ್ರೀರಾಂಪುರದ ನಿವಾಸಿ ಮಹಿಳೆಗೆ ಕೋವಿಡ್ 19 ತಗುಲಿರುವುದು ಖಚಿತವಾಗಿದೆ. ಬಿಬಿಎಂಪಿ ಅಧಿಕಾರಿಯ ಪತ್ನಿ ಈಗಾಗಲೇ ಕ್ಯಾನ್ಸರ್ ರೋಗದಿಂದ ಬಳಲುತಿದ್ದರು. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಅವರಿಗೆ ಕೊರೋನಾ ತಗುಲಿದೆ.
ಕೊರೋನಾತಂಕ: ಇ-ಪಾಸ್ ಇಲ್ಲದವರನ್ನು ತಡೆಯಿರಿ, ಸಚಿವ ಬೊಮ್ಮಾಯಿ
ನಗರದ HCG ಆಸ್ಪತ್ರೆಗೆ ಚಿಕಿತ್ಸೆಗೆ ಹೋದಂತ ಸಂದರ್ಭದಲ್ಲಿ ಗಂಟಲ್ ದ್ರವ ಪರೀಕ್ಷೆ ಮಾಡಿದಾಗ ಕೊರೋನಾ ಸೋಂಕು ತಗುಲಿರುವ ವಿಚಾರ ಪತ್ತೆಯಾಗಿದೆ. ಇವರ ಕೊರೋನಾ ತಗುಲಿದ್ದು ಹೇಗೆ ಎನ್ನುವುದು ಸದ್ಯಕ್ಕೆ ಪತ್ತೆಯಾಗಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.