ಯಾದಗಿರಿ ಆಧುನಿಕ ಏಕಲ್ಯವರ ಒಲಿಂಪಿಕ್ ಗುರಿಗೆ ಬೇಕಿದೆ ನೆರವು

* ಆಧುನಿಕ ಏಕಲವ್ಯರು ಈ ಗ್ರಾಮೀಣ ಪ್ರತಿಭೆಗಳು 
* ಯಾದಗಿರಿ ಜಿಲ್ಲೆಯಲ್ಲಿದ್ದಾರೆ ಆಧುನಿಕ ಏಕಲವ್ಯರು
* 10 ಜನ ವಿದ್ಯಾರ್ಥಿಗಳ ತಂಡದಿಂದ ದಿನನಿತ್ಯ ಅರ್ಚರಿ ಅಭ್ಯಾಸ
* ಬಡತನದ ನಡುವೆಯೂ ಅರಳಿದ ಪ್ರತಿಭೆಗಳು; ಬಿಲ್ಲುಗಾರಿಕೆಯಲ್ಲಿ ಇವರು ಎತ್ತಿದ ಕೈ

First Published Sep 22, 2021, 9:01 PM IST | Last Updated Sep 22, 2021, 9:01 PM IST

ಯಾದಗಿರಿ(ಸೆ. 22) ಈ  ಯಾದಗಿರಿ ಜಿಲ್ಲೆಯ ಆಧುನಿಕ ಏಕಲವ್ಯರ ಬಗ್ಗೆ ಹೇಳಲೇಬೇಕು. 10 ಜನ ವಿದ್ಯಾರ್ಥಿಗಳ ತಂಡದಿಂದ ದಿನನಿತ್ಯ ಅರ್ಚರಿ ಅಭ್ಯಾಸ ಮಾಡುತ್ತಿದೆ. ಬಡತನದ ನಡುವೆಯೂ ಅರಳಿದ ಪ್ರತಿಭೆಗಳು ಬಿಲ್ಲುಗಾರಿಕೆಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ರಕ್ತಗತವಾಗಿ ಬಂದ ಬಿಲ್ವಿದ್ಯೆಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.

ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್!

ಖೇಲೋ ಇಂಡಿಯಾ, ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಮಹಾತ್ವಾಕಾಂಕ್ಷೆ  ಹೊಂದಿದ್ದಾರೆ. ದೇವಾಪುರ ಪ್ರೌಢಶಾಲೆ ಆವರಣದಲ್ಲಿ ದಿನನಿತ್ಯ 4-5 ಗಂಟೆ ಅರ್ಚರಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಅವರಿಗೆ ಎಲ್ಲ ನೆರವನ್ನು ನೀಡುವ ಕೆಲಸ ಮಾಡಬೇಕಿದೆ.