ನನ್ನ ಬಗ್ಗೆ ಆನ್‌ಲೈನ್ ಸರ್ಚ್ ಮಾಡ್ರಿ ಗೊತ್ತಾಗುತ್ತೆ, ಅದಿಲ್ಲೆ ಸುಮರಿವಾಲ್ಲಾಗೆ ಕಾಶೀನಾಥ್ ಟಾಂಗ್

- ಅಥ್ಲೆಟಿಲ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾಗೆ ಟಾಂಗ್ ಕೊಟ್ಟ ಕಾಶೀನಾಥ್

- 2015-17 ರವರೆಗೆ ನಾನೇ ನೀರಜ್‌ಗೆ ಕೋಚ್ ಆಗಿ ಕೆಲಸ ಮಾಡಿದ್ದೇನೆ

- ನಾನು ಯಾರುಂತ ತಿಳಿದಿಲ್ಲದಿದ್ದರೆ ಅನ್‌ಲೈನ್‌ನಲ್ಲಿ ಸರ್ಚ್ ಮಾಡಿ ತಿಳಿಯುತ್ತೆ ಎಂದು ಕಾಶೀನಾಥ್

First Published Aug 11, 2021, 6:07 PM IST | Last Updated Aug 11, 2021, 6:07 PM IST

ಬೆಂಗಳೂರು (ಆ. 11): ನೀರಜ್ ಚೋಪ್ರಾಗೆ ಕಾಶೀನಾಥ್ ಕೋಚ್ ಆಗಿರಲಿಲ್ಲ ಎಂದು ಅಥ್ಲೆಟಿಕ್ ಸಂಸ್ಥೆ ಆರೋಪ ವಿಚಾರವಾಗಿ ಅಥ್ಲೆಟಿಲ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆಗೆ ಕಾಶೀನಾಥ್ ಸ್ಪಷ್ಟನೆ ನೀಡಿದ್ದಾರೆ. 

2015-17ರವರೆಗೆ ನಾನೇ ನೀರಜ್‌ಗೆ ಕೋಚ್ ಆಗಿ ಕೆಲಸ ಮಾಡಿದ್ದೇನೆ. ಬಳಿಕ ನೀರಜ್ ವಿದೇಶಿ ಕೋಚ್‌ಗಳ ಬಳಿಕ ತರಬೇತಿ ಪಡೆದಿರುವುದನ್ನು ನಾನು ತಿಳಿಸಿದ್ದೆ. ಆದರೆ, ಅದಿಲ್ಲೆ ಸುಮರಿವಾಲ್ಲಾ ಮಾತ್ರ ಕಾಶೀನಾಥ್ ಅಂದ್ರೆ ಯಾರು ಗೊತ್ತಿಲ್ಲ, ಇಂಡಿಯಾ ಕ್ಯಾಂಪ್‌ನಲ್ಲಿ ಕೋಚ್ ಆಗಿರಲಿಲ್ಲ ಎಂದಿದ್ದಾರೆ. ಇವರ ಹೇಳಿಕೆ ಕೇಳಿ ಆಶ್ವರ್ಯ, ನೋವು ಹಾಗೂ ನಗು ಕೂಡಾ ಬಂದಿದೆ. ನನ್ನ ಬಗ್ಗೆ ಮಾಧ್ಯಮದವರಿಗೆ ತಿಳಿದಿದೆ, ಕೋಚ್ ಆಗಿದ್ದ ಬಗ್ಗೆ ಪ್ರೂಫ್ ಕೂಡಾ ನೀಡಿದ್ದೆ. ನೀರಜ್ ಜತೆಯೂ ಈ ಬಗ್ಗೆ ಮಾತನಾಡಿದ್ದು, ಆತ ನಾನು ಮಾತನಾಡುತ್ತೇನೆ ಎಂದು ಕಾಶೀನಾಥ್ ಹೇಳಿದ್ಧಾರೆ. 

ಅಭಿನವ್ ಹೆಜ್ಜೆ ಅನುಕರಿಸಿದ್ದೆ ಎಂದ ನೀರಜ್ : ಬಿಂದ್ರಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

'ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರೋದು ಖುಷಿಯಾಗಿದೆ. ನನಗೆ ಯಾವುದೇ ರೀತಿಯ ಚಿಂತೆಯಿಲ್ಲ, ಕೆಲವರಿಗೆ ಇರೋ ಸಂಶಯವನ್ನು ದೂರ ಮಾಡಲು ಮುಂದೆ ಬಂದಿದ್ದೇನೆ. ನಾನು ಯಾರುಂತ ತಿಳಿದಿಲ್ಲದಿದ್ದರೆ ಅನ್‌ಲೈನ್‌ನಲ್ಲಿ ಸರ್ಚ್ ಮಾಡಿ ತಿಳಿಯುತ್ತೆ ಎಂದು ಕಾಶೀನಾಥ್ ಸ್ಪಷ್ಟನೆ ನೀಡಿದ್ದಾರೆ.