Cinema Hungama: ನಿರೀಕ್ಷೆ ಮತ್ತು ರಿಯಾಲಿಟಿ ಬಗ್ಗೆ ಯಶ್‌ ಹೇಳಿದ್ದೇನು ?

ನಟ ಯಶ್‌ ಒಂದು ಫೋಟೋವನ್ನು ಶೇರ್‌ ಮಾಡುವ ಮೂಲಕ ನಿರೀಕ್ಷೆ ವರ್ಸಸ್‌ ರಿಯಾಲಿಟಿ ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ.

First Published May 10, 2023, 12:39 PM IST | Last Updated May 10, 2023, 12:39 PM IST

ಸ್ಯಾಂಡಲ್‌ವುಡ್‌ನ ಬೆಸ್ಟ್‌ ಕಪಲ್‌ ಅಂದ್ರೆ, ಅದು ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್‌. ಇವರಿಬ್ಬರ ಜೀವನ ಶೈಲಿ ತುಂಬಾ ಜನಕ್ಕೆ ರೋಲ್‌ ಮಾಡೆಲ್‌ ಆಗಿದೆ. ಯಾಕಂದ್ರೆ ಇವರಿಬ್ಬರು ಬರೀ ಗಂಡ-ಹೆಂಡತಿಯಾಗಿ ಮಾತ್ರವಲ್ಲದೇ, ಉತ್ತಮ ಸ್ನೇಹಿತರಾಗಿ ಸಹ ಇದ್ದಾರೆ. ಅಲ್ಲದೇ ಬೆಸ್ಟ್‌ ಲವರ್ಸ್‌ ಆಗಿದ್ದು, ಮಕ್ಕಳಿಗೆ ಉತ್ತಮ ತಂದೆ ತಾಯಿ ಸಹ ಆಗಿದ್ದಾರೆ. ಇವರಿಬ್ಬರ ನಡುವೆ ಬಹಳ ಅನ್ಯೋನ್ಯತೆ ಇದೆ. ಇದೀಗ ಯಶ್‌ ರಾಧಿಕಾ ಅವರ ನಿರೀಕ್ಷೆ ಏನು?. ಆದ್ರೆ ಆಗ್ತಿರೋದೇನು ಎಂಬುದನ್ನು ಫೋಟೋ ಮೂಲಕ ಹೇಳಿದ್ದಾರೆ. ಈ ಫೋಟೋದಲ್ಲಿ ನಿರೀಕ್ಷೆ ವರ್ಸಸ್‌ ರಿಯಾಲಿಟಿ ಎಂದು ಬರೆದುಕೊಂಡಿದ್ದಾರೆ. ಒಂದು ಫೋಟೋದಲ್ಲಿ ಯಶ್‌ ಮತ್ತು ರಾಧಿಕಾ ಕೈ ಹಿಡಿದುಕೊಂಡು ಬರುತ್ತಿದ್ದು, ಇದನ್ನ ಯಶ್‌ ನಿರೀಕ್ಷೆ ಎಂದಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ಮಕ್ಕಳ ಜೊತೆ ಓಡಾಡುತ್ತಿದ್ದು, ಇದಕ್ಕೆ ರಿಯಾಲಿಟಿ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ: Karnataka Election 2023: ಪತ್ನಿ ಜೊತೆ ಬಂದು ಮತ ಹಾಕಿದ ನವರಸ ನಾಯಕ ಜಗ್ಗೇಶ್‌

Video Top Stories