ವಿಜಯ್ ದೇವರಕೊಂಡ ಶ್ರೀಲೀಲಾ ಹೊಸ ಸಿನಿಮಾ ಅನೌನ್ಸ್: ನಟನ ಗೆಲುವಿಗೆ ಬೇಕೆ ಬೇಕಾ ಕನ್ನಡದ ಹಿರೋಯಿನ್ಸ್ ?
ರಶ್ಮಿಕಾ ಜಾಗ ಕಿತ್ತುಕೊಂಡ ಕನ್ನಡದ 'ಕಿಸ್' ಚೆಲುವೆ ಶ್ರೀಲೀಲಾ !
ಅರ್ಜುನ್ ರೆಡ್ಡಿ ಜೊತೆ ಮಿಂಚೋಕೆ ರೆಡಿಯಾದ ಭರಾಟೆ ಬ್ಯೂಟಿ!
ವಿಜಯ್ ದೇವರಕೊಂಡ ಶ್ರೀಲೀಲಾ ಹೊಸ ಸಿನಿಮಾ ಅನೌನ್ಸ್!
ಟಾಲಿವುಡ್ ಜಗತ್ತಲ್ಲಿ ಟಾಪ್ ಆಫ್ ದಿ ಮ್ಯಾಟರ್ ಅಂದ್ರೆ ಅದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಈ ಜೋಡಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಈ ಜೋಡಿ ತೆರೆ ಮೇಲೆ ಒಂದಾದ್ರೆ ಆ ಸಿನಿಮಾ ಸೂಪರ್ ಹಿಟ್ ಆಗೋದಂತು ಪಕ್ಕಾ. ಆದ್ರೆ ಇನ್ಮುಂದೆ ಹಾಗೆ ಆಗದಿಲ್ವೇನೋ ? ಯಾಕಂದ್ರೆ ರಶ್ಮಿಕಾ ಜಾಗದಲ್ಲಿ ಈಗ ಸ್ಯಾಂಡಲ್‌ವುಡ್‌ನ ಕಿಸ್ ಚೆಲುವೆ ಶ್ರೀಲೀಲಾ ಎಂಟ್ರಿ ಆಗಿದೆ. ಲೈಗರ್ ಸೋಲಿನ ಬಳಿಕ ನಟ ವಿಜಯ್ ದೇವರಕೊಂಡ ಸಾಲು ಸಾಲು ಸಿನಿಮಾ ಒಪ್ಪಿಕೊಂಡಿದ್ದಾರೆ. ವಿಜಯ್ ದೇವರಕೊಂಡ 12ನೇ ಸಿನಿಮಾ ಸೆಟ್ಟೇರಿದೆ. ವಿಜಯ್‌ಗೆ ಈಗ ಹೊಸ ಸಿನಿಮಾದಲ್ಲಿ ಕರುನಾಡ ಚೆಲುವೆ ಶ್ರೀಲೀಲಾ ಹೀರೋಯಿನ್ ಆಗಿದ್ದಾರೆ. ಸಿನಿಮಾದ ಮುಹೂರ್ತ ಕೂಡ ಆಗಿದ್ದು, ಜೆರ್ಸಿ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಯುವ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಸ್ಟೋರಿ ಈ ಸಿನಿಮಾದಲ್ಲಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಅರ್ಜುನ್ ರೆಡ್ಡಿ ಈ ಸಿನಿಮಾದಲ್ಲೂ ರಿಪೀಟ್ ಆಗ್ತಾನೆ ಅಂತ ಟಿಟೌನ್ನಲ್ಲಿ ಟಾಕ್ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಪ್ಯಾನ್ ಇಂಡಿಯಾ 'ಜೈಲರ್' ರಿಲೀಸ್ ಡೇಟ್ ಫಿಕ್ಸ್: ಶಿವಣ್ಣನ ಫಸ್ಟ್ ಲುಕ್ ಹೇಗಿದೆ ಗೊತ್ತಾ?