ಪ್ಯಾನ್ ಇಂಡಿಯಾ 'ಜೈಲರ್' ರಿಲೀಸ್ ಡೇಟ್ ಫಿಕ್ಸ್: ಶಿವಣ್ಣನ ಫಸ್ಟ್ ಲುಕ್ ಹೇಗಿದೆ ಗೊತ್ತಾ?
'ಜೈಲರ್' ಸಿನಿಮಾದಲ್ಲಿ ದಿಗ್ಗಜ ನಟರು ನಟಿಸುತ್ತಿದ್ದು, ಅವರ ಜೊತೆ ರಮ್ಯಾಕೃಷ್ಣ, ವಸಂತ ರವಿ, ವಿನಾಯಕನ್, ಯೋಗಿ ಬಾಬು ಸೇರಿದಂತೆ ಹೆಸರುವಾಸಿ ಕಲಾವಿದರು ನಟಿಸಿದ್ದಾರೆ.
ಕಾಲಿವುಡ್ ಸೂಪರ್ ಸ್ಟಾರ್ ತಲೈವಾ ರಜಿನಿಕಾಂತ್ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಸಿನಿಮಾ ಜೈಲರ್. ಇಷ್ಟು ದಿನ ಈ ಸಿನಿಮಾದಲ್ಲಿ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಮಲೆಯಾಳಂ ಸ್ಟಾರ್ ಮೋಹನ್ ಲಾಲ್, ಬಾಲಿವುಡ್‌ನ ಜಾಕಿ ಶ್ರಾಫ್ ಹಾಗೂ ತೆಲುಗು ಚಿತ್ರರಂಗದ ನಟ ಸುನೀಲ್ ನಟಿಸುತ್ತಿದ್ದಾರೆ ಅಂತ ಹೇಳಲಾಗುತ್ತಿತ್ತು. ಈಗ ಜೈಲರ್ ಗ್ಲಿಮ್ಸ್ ರಿಲೀಸ್ ಆಗಿದೆ. ಇದರಲ್ಲಿ ಶಿವಣ್ಣ, ಮೋಹನ್ ಲಾಲ್, ಜಾಕಿ ಖಡಕ್ ಲುಕ್ ಕೊಟ್ಟಿದ್ರೆ, ಮತ್ತೊಂದು ಕಡೆ ಬೆಳ್ಳಿತೆರೆ ಮೇಲೆ ರಜನಿಕಾಂತ್ ಜೈಲರ್ ಎಂಟ್ರಿ ಯಾವಾಗ ಅನ್ನೋ ಟೈಂ ರಿವೀಲ್ ಆಗಿದೆ. ರಜನಿಕಾಂತ್ ಜೈಲರ್‌ನಲ್ಲಿ ಶಿವಣ್ಣ ನಟಿಸಿದ್ದಾರೆ. ಈಗ 'ಜೈಲರ್' ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಆಗಸ್ಟ್ 10ರಂದು ವಿಶ್ವದಾದ್ಯಂತ ಜೈಲರ್ ಸಿನಿಮಾ ತೆರೆ ಕಾಣುತ್ತಿದ್ದು, ರಜನಿ, ಶಿವಣ್ಣ ಮೋಹನ್ ಲಾಲ್ ವರ್ಲ್ಡ್ ವೈಡ್ ದರ್ಬಾರ್ ಮಾಡಲಿದ್ದಾರೆ. 'ಜೈಲರ್'ನ ಈ ಗ್ಲಿಂಪ್ಸ್ ಸದ್ಯ ಸಖತ್ ಕಿಕ್ ಕೊಡುತ್ತಿದೆ.