Asianet Suvarna News Asianet Suvarna News

ಮಗಳ ಮುದ್ದಾದ ವಿಡಿಯೋ ಹಂಚಿಕೊಂಡ ರಾಮ್‌ಚರಣ್- ಉಪಾಸನಾ: ಮಗು ಕ್ಯೂಟ್ ಎಂದ ಫ್ಯಾನ್ಸ್..!

ಕಂದನನ್ನು ನೆನೆದು ಭಾವುಕರಾದ ಚಿರಂಜೀವಿ ಸೊಸೆ!
ಮನೆಗೆ ಮೊಮ್ಮಗಳು ಬಂದ ಖುಷಿಯಲ್ಲಿ ಮೆಗಾಸ್ಟಾರ್
ವಿಡಿಯೋ ನೋಡಿ ಮಗು ಕ್ಯೂಟ್ ಎಂದ ಫ್ಯಾನ್ಸ್

ಸೌತ್ ಸ್ಟಾರ್ ನಟ, ಮೆಗಾಸ್ಟಾರ್ ಚಿರಂಜೀವಿ ಪುತ್ರ, ಆರ್ ಆರ್ ಆರ್ ಚಿತ್ರದ ಸ್ಟಾರ್ ರಾಮ್ ಚರಣ್(actor Ramcharan) ತನ್ನ ಮುದ್ದು ಮಗಳ ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದಾರೆ. ಪತ್ನಿ ಉಪಾಸನಾ(Upasana) ತನ್ನ ಮದರ್ ಹುಡ್ ಜರ್ನಿಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ರಾಮ್ ಚರಣ್ 2012 ರಲ್ಲಿ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ನ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಕಾಮಿನೇನಿ ಅವರನ್ನು ವಿವಾಹವಾದರು. ಮದುವೆಯಾಗಿ 11 ವರ್ಷಗಳಾದ ನಂತರ ಮಗುವಾಗಿದ್ದು, ಇಡೀ ಕುಟುಂಬದಲ್ಲಿ ದೊಡ್ಡ ಹರ್ಷದ್ಗಾರ ಸಂಭ್ರಮ. ಆ ಭಾವನೆಗಳನ್ನು ಈ ವೀಡಿಯೋದಲ್ಲಿ ಹಿಡಿದಿಡಲಾಗಿದೆ. ಕಳೆದ ಜೂನ್ 20 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಸುಂದರವಾದ ಹೆಣ್ಣು ಮಗು(Baby girl) ಜನಿಸಿದೆ. ಜುಬಿಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಯಲ್ಲಿ ಅವರ ಮಗು ಜನಿಸಿತು. ಲಲಿತ ಸಹಸ್ರನಾಮದಲ್ಲಿ ಬರುವ ಕ್ಲಿನ್ ಕ್ಲಾರಾ ಎಂಬ ದೇವತೆಯ ಹೆಸರನ್ನೇ ಇಡಲಾಯಿತು. ಮೊಮ್ಮಗಳ ಆಗಮನಕ್ಕೆ ಮೆಗಾಸ್ಟಾರ್  ಆನಂದಕ್ಕೆ ಪಾರವೇ ಇಲ್ಲ.¸ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಅನಿರೀಕ್ಷಿತವಾಗಿ ಬನ್ನಿ ಹೊಡೆದೇ ಬಿಟ್ಟರೂ ಪುಷ್ಪ 2 ಪಂಚ್ ಡೈಲಾಗ್: ಹೇಗಿದೆ ಗೊತ್ತಾ ?

Video Top Stories