ಕಿಚ್ಚ ಸುದೀಪ್ VS ನಿರ್ಮಾಪಕರ ಜಟಾಪಟಿ: ಕಹಾನಿ ಮೇ ಟ್ವಿಸ್ಟ್..ಹೊಸ ಬಾಂಬ್ ಸಿಡಿಸಿದ ವೀರಕಪುತ್ರ..!
ನಿರ್ಮಾಪಕ ಎಮ್.ಎನ್.ಕುಮಾರ್ ಆರೋಪಕ್ಕೆ ವೀರಕಪುತ್ರ ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.
ನಟ ಸುದೀಪ್( Kiccha Sudeep) ವಿರುದ್ಧ ನಿರ್ಮಾಪಕ ಎಮ್.ಎನ್. ಕುಮಾರ್(roducer MN Kuma) ಆರೋಪ ಮಾಡುತ್ತಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರವನ್ನು ಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದೀಗ ಸುದೀಪ್ ಪರವಾಗಿ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್( Veerakaputra Srinivas) ಅವರು ಬ್ಯಾಟ್ ಬೀಸಿದ್ದಾರೆ. ಈ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ. ನಮ್ಮ ಮನಸಾಕ್ಷಿಗೆ ಸಾಕ್ಷಿ ಎಂದು ನಿರ್ಮಾಪಕ ಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೀರಕಪುತ್ರ ಶ್ರೀನಿವಾಸ್ ಈ ಮನಸಾಕ್ಷಿ, ವನಜಾಕ್ಷಿ, ಮೀನಾಕ್ಷಿಯನ್ನಿಟ್ಟುಕೊಂಡು ವ್ಯವಹಾರ ಮಾಡೋದನ್ನು ಗಾಂಧಿನಗರದವರು ಎಲ್ಲಿಂದ ಕಲಿತರು' ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಘಾಟು: ಪುಷ್ಪ ಸಿನಿಮಾ ರೀತಿ ಸಪ್ಲೈ ಮಾಡ್ತಿದ್ದ ಗ್ಯಾಂಗ್ ಅಂದರ್