Asianet Suvarna News Asianet Suvarna News

'ಟಾಕ್ಸಿಕ್'ಗೆ ಕಿಕ್ ಸ್ಟಾರ್ಟ್ ಕೊಟ್ಟ ನ್ಯಾಷನಲ್ ಸ್ಟಾರ್! ಸಿನಿಮಾ ಶೂಟಿಂಗ್ ಪ್ಲ್ಯಾನ್‌ನ ಫೋಟೋ ವೈರಲ್..!

ರಾಕಿಂಗ್ ಸ್ಟಾರ್ ಯಶ್ ಸಂಪೂರ್ಣ ಗಮನ ಈಗ ‘ಟಾಕ್ಸಿಕ್’ ಸಿನಿಮಾದ ಮೇಲಿದೆ. ಅಭಿಮಾನಿಗಳು ಹಗಲು-ರಾತ್ರಿ ಇದೇ ಸಿನಿಮಾದ ಜಪ ಮಾಡುತ್ತಿದ್ದಾರೆ. 
 

First Published Mar 26, 2024, 11:05 AM IST | Last Updated Mar 26, 2024, 11:05 AM IST

ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಹು ದೊಡ್ಡ ಗೆಲುವಿನ ಬಳಿಕ ಯಶ್(Yash) ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’(Toxic movie) ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೀಗ ನ್ಯಾಷನಲ್ ಸ್ಟಾರ್ ಯಶ್ ಟಾಕ್ಸಿಕ್ ಕಿಕ್ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ. ಟಾಕ್ಸಿಕ್ ಶೂಟಿಂಗ್ ಪ್ಲಾನ್‌ನ ಒಂದಿಷ್ಟು ಫೋಟೋಗಳು ವೈರಲ್ ಆಗಿವೆ. ಯಶ್ ಗುರಿ ದೊಡ್ಡದಾಗಿದೆ. ಯಾವಾಗಲೂ ದೊಡ್ಡದಾಗಿ ಆಲೋಚನೆ ಮಾಡೋ ಯಶ್ ಟಾಕ್ಸಿಕ್ ಸಿನಿಮಾವನ್ನೂ ದೊಡ್ಡದಾಗೆ ತೆರೆಗೆ ತರುತ್ತಿದ್ದಾರೆ. ಇದರ ಸಿದ್ಧತೆ ಜೋರಾಗಿ ನಡೆದಿತ್ತು. ಶೂಟಿಂಗ್ ಕೂಡ ಅಷ್ಟೇ ಕಾಳಜಿಯಿಂದ ಆಗುತ್ತಿದೆ. ಹೀಗಾಗಿ ಗೋವಾದಲ್ಲಿ ನಟ ಯಶ್ ನಿರ್ದೇಶಕಿ ಗೀತು ಮೋಹನ್ ದಾಸ್ ತನ್ನ ಟೀಂ ಜೊತೆ ಒಂದಷ್ಟು ಶೂಟಿಂಗ್ ಪ್ಲಾನ್ ಮಾಡಿದ್ದಾರೆ. ಯಶ್ ಕಣ್ಣು ತಪ್ಪಿಸಿ ಗೋವಾದ ಟಾಕ್ಸಿಕ್ ಶೂಟಿಂಗ್ ಪ್ಲಾನ್ ಒಂದಷ್ಟು ಫೋಟೋ ವೀಡಿಯೋಗಳು ಹೊರ ಬಂದಿವೆ. ಟಾಕ್ಸಿಕ್ ಬಗ್ಗೆ ಈಗ ಟಾಕ್ ಇರೋದು ಈ ಸಿನಿಮಾದಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ಹಾಗೂ ಶೃತಿ ಹಾಸನ್ ನಟಿಸುತ್ತಾರೆ ಅನ್ನೋದು. ಅದು ನಿಜ ಕೂಡ. ಆದ್ರೆ ಮತ್ತೊಂದೆ ಲೇಟೆಸ್ಟ್ ಅಪ್ಡೇಟ್ ಅಂದ್ರೆ ಈ ಸಿನಿಮಾದಲ್ಲಿ ಯಶ್ ಎದುರು ಕಿಂಗ್ ಖಾನ್ ಶಾರುಖ್ ಖಾನ್ ತೊಡೆ ತಟ್ಟುತ್ತಾರೆ ಅನ್ನೋದು. ಆದ್ರೆ ಈ ಬಗ್ಗೆ ಯಾವ್ದೇ ಸುದ್ದಿ ಖಚಿತವಾಗಿಲ್ಲ. 

ಇದನ್ನೂ ವೀಕ್ಷಿಸಿ:  Darshan Bullock Cart Ride: ಚಕ್ಕಡಿ ಬಂಡಿಯಲ್ಲಿ ದರ್ಶನ್ ಸವಾರಿ..! ಮಗನ ಕೂರಿಸಿಕೊಂಡು ಎತ್ತಿನ ಬಂಡಿ ಓಡಿಸಿದ ನಟ!

Video Top Stories