Darshan Bullock Cart Ride: ಚಕ್ಕಡಿ ಬಂಡಿಯಲ್ಲಿ ದರ್ಶನ್ ಸವಾರಿ..! ಮಗನ ಕೂರಿಸಿಕೊಂಡು ಎತ್ತಿನ ಬಂಡಿ ಓಡಿಸಿದ ನಟ!
ನಟ ದರ್ಶನ್ ಸಿನಿಮಾ ಕೆಲಸ ಇಲ್ಲ ಅಂದ್ರೆ ಹೆಚ್ಚಾಗಿ ಮಾಡೋ ಕೆಲಸ ಫ್ರೆಂಡ್ಸ್ ಜೊತೆ ಮೈಸೂರಿನಲ್ಲಿರೋ ತನ್ನ ತೋಟದ ಮನೆ ಸೇರೋದು. ಇಲ್ಲ ಅಂದ್ರೆ ಕ್ಯಾಮೆರಾ ಹಿಡಿದು ತನ್ನ ಕಾಸ್ಲಿ ಕಾರು ಹತ್ತಿಕೊಂಡು ಕಾಡು ಸುತ್ತೋದು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯೋದು. ಆದ್ರೆ ಈ ಭಾರಿ ನಟ ದರ್ಶನ್ ತನ್ನ ಜೀವನದಲ್ಲಿ ಹೊಸ ಅನುಭವನ ಒಂದನ್ನ ಪಡೆದಿದ್ದಾರೆ.
ನಟ ದರ್ಶನ್ ಮೈಸೂರಿನಲ್ಲಿರೋ(Mysore) ತನ್ನ ಫಾರ್ಮ್ ಹೌಸ್‌ನಲ್ಲಿ(Farm House) ಎಲ್ಲಾ ತರದ ತಳಿಯ ಹಸುಗಳು(Cows) ಎತ್ತುಗಳನ್ನ ಸಾಕಿದ್ದಾರೆ. ಈಗ ಅದೇ ಎತ್ತುಗಳಿಕೆ ಚಕ್ಕಡಿ ಬಂಡಿ ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ತನ್ನ ಮಗಶ್ ವಿನೀಶ್‌ರನ್ನ ಕರೆದುಕೊಂಡು ಫಾರ್ಮ್ ಹೌಸ್ ಸುತ್ತಮುತ್ತ ಸವಾರಿ ಮಾಡಿದ್ದಾರೆ. ನಟ ದರ್ಶನ್(Actor Darshan) ಎತ್ತಿನ ಬಂಡಿ(Bullock cart) ಕಟ್ಟಿಕೊಂಡು ನಾಲ್ಕೈದು ಜನ ಸ್ನೇಹಿತರ ಜೊತೆ ಸೇರಿ ನೈಟ್ ಔಟ್ ಹೋಗಿದ್ದಾರೆ. ತನ್ನ ಫಾರ್ಮ್ ಹೌಸ್ನಿಂದ ಸ್ವಲ್ಪವೇ ದೂರದಲ್ಲಿರೋ ಕಾವೇರಿ ನದಿ ದಡದಲ್ಲಿ ನೈಟ್ ಕ್ಯಾಂಪ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ನೈಟ್ ಔಟ್ ಅಂದ್ರೆ ಬೈಕು, ಕಾರು ಏರಿ ಜನ ಹೊರಟುಬಿಡುತ್ತಾರೆ. ಪಬ್ಬು, ರೆಸ್ಟೋರೆಂಟ್ ಎಂದು ಸುತ್ತಾಡುತ್ತಾರೆ. ಆದರೆ ನಟ ದರ್ಶನ್ ನೈಟ್‌ಔಟ್ ರೀತಿಯೇ ಬೇರೆ. ನದಿ ದಡ ಕೆರೆ ದಡದ ರಾತ್ರಿಯೆಲ್ಲಾ ಕಾಲ ಕಳೆಯೋದು ದರ್ಶನ್ ಹೊಸ ಸ್ಟೈಲ್. ನಟ ದರ್ಶನ್ ಸದ್ಯ 'ಡೆವಿಲ್' ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ರಾಕ್‌ಲೈನ್ ಸ್ಟುಡಿಯೋದಲ್ಲಿ 'ಡೆವಿಲ್' ಶೂಟಿಂಗ್ ಶುರುವಾಗಿದೆ. ಪ್ರಕಾಶ್ ವೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಾವೇ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.
ಇದನ್ನೂ ವೀಕ್ಷಿಸಿ: ಮನೆ ದೇವರ ಜಾತ್ರೆಯಲ್ಲಿ ಧ್ರುವ ..! ಜಕ್ಕೇನಹಳ್ಳಿ ಜಾತ್ರೆಯಲ್ಲಿ ಆ್ಯಕ್ಷನ್ ಪ್ರಿನ್ಸ್ ಜೊತೆ ಕುಟುಂಬ !