ಪುಷ್ಪರಾಜ್‌ನನ್ನು ಬೆಳೆಯಲು ಬಿಡಲ್ಲ ಎಂದ ಪೊಲೀಸರು !

ಪುಷ್ಪ ಸಿನಿಮಾದ ಕತೆಯಂತೆ ಇದೆ ಈ ಕಳ್ಳರ ಸ್ಟೋರಿ !
ಪುಷ್ಪರಾಜನನ್ನ ಬೆಳೆಯಲು ಬಿಡಲ್ಲ ಎಂದ ಪೊಲೀಸರು!
ಬೆಂಗಳೂರು ಪೊಲೀಸರಿಂದ ರಕ್ತಚಂದನ ಕಳ್ಳರ ಸೆರೆ !
 

First Published Apr 21, 2023, 4:07 PM IST | Last Updated Apr 21, 2023, 4:07 PM IST

ಸುಕುಮಾರ್ ನಿರ್ದೇಶನದ ತೆಲುಗಿನ 'ಪುಷ್ಪ' ಸಿನಿಮಾ 2 ವರ್ಷಗಳ ಹಿಂದೆ ಸಂಚಲನ ಸೃಷ್ಟಿಸಿತ್ತು. ರಕ್ತಚಂದನ ಸ್ಮಗ್ಲರ್‌ 'ಪುಷ್ಪರಾಜ್‌' ಆಗಿ ಅಲ್ಲು ಅರ್ಜುನ್ ಜನ ಮನ ಗೆದ್ದಿದ್ರು. 'ಪುಷ್ಪ' ಸಿನಿಮಾ ನೋಡಿದ ಮೇಲೆ ಈ ಸಿನಿಮಾದಿಂದ ಪ್ರೇಕ್ಷಕರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ ಅನ್ನೋ ಪ್ರಶ್ನೆ ಸಹ ಎದ್ದಿತ್ತು. ಇದೀಗ ಇದೇ ಪುಷ್ಪ ಸಿನಿಮಾದ ಕತೆಯಂತೆ ರಕ್ತ ಚಂದನ ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರನ್ನ ಬೆಂಗಳೂರು ಪೊಲೀಸರು ಬಂದಿಸಿದ್ದಾರೆ. ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ರಕ್ತಚಂದನ ಮರಗಳನ್ನ ಕಳ್ಳತನ ಮಾಡಲಾಗ್ತಿತ್ತು. ಸದ್ಯ ಗಿರಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿ 126 ಕೆಜಿ ರಕ್ತ ಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: ನಟ ಸುದೀಪ್‌ಗೆ ಆಕ್ಷನ್ ಕಟ್ ಹೇಳ್ತಾರಾ ತಮಿಳು ನಿರ್ದೇಶಕ ಚರಣ್ ?

Video Top Stories