ನಟ ಸುದೀಪ್‌ಗೆ ಆಕ್ಷನ್ ಕಟ್ ಹೇಳ್ತಾರಾ ತಮಿಳು ನಿರ್ದೇಶಕ ಚರಣ್ ?
ಎಲೆಕ್ಷನ್ ಬಿಸಿ ಮಧ್ಯೆ ಸುದೀಪ್ ಹೊಸ ಸಿನಿಮಾ ಗಮಲು!
ಕಿಚ್ಚನಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆಕ್ಷನ್ ಕಟ್ !
ಸುದೀಪ್ ಸಿನಿಮಾ ಲೀಸ್ಟ್ ಸೇರಿಕೊಂಡ ತಮಿಳು ಡೈರೆಕ್ಟರ್
ಸ್ಯಾಂಡಲ್‌ವುಡ್ ಹೆಬ್ಬುಲಿ ಕಿಚ್ಚ ಸುದೀಪ್ ಚುನಾವಣಾ ಅಖಾಡಲ್ಲಿ ಘರ್ಜಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಪರ ಮತ ಬೇಟೆಗೆ ಅವರು ಇಳಿದಾಗಿದೆ. ಹಾಗಾಗಿ ಕಿಚ್ಚನ ಪ್ರಚಾರದ ಕಹಳೆಯಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ಹುರುಪು ಬಂದಂತೆ ಕಾಣುತ್ತಿದೆ. ಸುದೀಪ್ ಇನ್ನೂ 15 ದಿನಗಳ ಕಾಲ ಬಿರು ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಈ ಮಧ್ಯೆ ಹೆಬ್ಬುಲಿಯ ಹೊಸ ಸಿನಿಮಾ ಗಮಲು ಕೂಡ ಜೋರಾಗೆ ಹಬ್ಬುತ್ತಿದೆ. ಸುದೀಪ್ ಮೂರು ಸಿನಿಮಾಗಳ ಕಥೆಯನ್ನು ಕೇಳಿದ್ದು, ಅದರಲ್ಲಿ ತಮಿಳು ನಿರ್ದೇಶಕ ಚರಣ್ ಚಿತ್ರ ಸಹ ಇದೆ ಎಂದು ಹೇಳಲಾಗ್ತಿದೆ. ಆದ್ರೆ ಇದಕ್ಕೆಲ್ಲಾ ಉತ್ತರ ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬಳಿಕವಷ್ಟೇ ಸಿಗುತ್ತೆ ಅನ್ನೋದು ಮಾತ್ರ ಸತ್ಯ.
ಇದನ್ನೂ ವೀಕ್ಷಿಸಿ: ನಟ ಸುದೀಪ್‌ಗೆ ಬೆದರಿಕೆ ಪ್ರಕರಣ: ಮಾಜಿ ಕಾರು ಚಾಲಕನ ವಿಚಾರಣೆ