ಎಲೆಕ್ಷನ್ ಮುಗಿಯುತ್ತಿದ್ದಂತೆ ಅಂಬಿ ಮನೆಯಲ್ಲಿ ಸಂಭ್ರಮ: ಮಗನ ಮದುವೆಗೆ ಸುಮಲತಾ ಭಾರಿ ಶಾಪಿಂಗ್ !

ಮದುವೆ ದಿನ, ಆರತಕ್ಷತೆ ದಿನ ಅಭಿ-ಅವಿವಾ ಮುದ್ದಾಗಿ ಕಾಣಬೇಕು ಅಂತ ಹೆಸರಾಂತ ಡಿಸೈನರ್ ಒಬ್ಬರಿಂದ ಈ ಜೋಡಿಯ ಕಾಸ್ಟ್ಯೂಮ್ ರೆಡಿ ಮಾಡಿಸಲಾಗ್ತಿದೆ. ಜ್ಯೂವೆಲರಿ ಹಾಗೂ ಬಟ್ಟೆ ಸೇರಿ 50 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆಯಂತೆ.

First Published May 23, 2023, 11:02 AM IST | Last Updated May 23, 2023, 11:02 AM IST

ವಿಧಾನಸಭಾ ಚುನಾವಣೆ ಮುಗಿದಿದೆ. ಸ್ಯಾಂಡಲ್‌ವುಡ್‌ನಲ್ಲಿ ಈಗ ಬಹು ದೊಡ್ಡ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗ್ತಿದೆ. ಅದು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಏಕ ಮಾತ್ರ ಪುತ್ರ ಅಭಿಷೇಕ್ ಮದುವೆ. ಹೌದು, ನಟ ಅಭಿಷೇಕ್ ಹಾಗೂ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪರನ್ನ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಈಗ ಮದುವೆ ಆಗುತ್ತಿದ್ದಾರೆ. ಇದೇ ಜೂನ್ 5 ಮತ್ತು 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕ್ಯೂಟ್ ಜೋಡಿ ಮ್ಯಾರೇಜ್ ನಡೆಯಲಿದೆ. ಇದಕ್ಕಾಗಿ ನಟಿ ಸಂಸದೆ ಸುಮಲತಾ ಅಂಬರೀಶ್ ಭಾರಿ ತಯಾರಿಯಲ್ಲಿದ್ದಾರೆ. ಸುಮಲತಾ ಅಂಬರೀಶ್ ತನ್ನ ಮಗನ ಮದುವೆಯನ್ನ ಗ್ರ್ಯಾಂಡ್ ಆಗಿ ಮಾಡೋದಕ್ಕೆ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಮದುವೆಗೆ 10 ಸಾವಿರ ಜನರಿಗೆ ಆಹ್ವಾನ ಕೊಟ್ಟಿದ್ದಾರೆ. ಮತ್ತೊಂದ್ ಕಡೆ ಮಗ ಸೊಸೆಯ ಮದುವೆ ಬಟ್ಟೆಗಾಗಿ 50 ಲಕ್ಷ ಖರ್ಚು ಮಾಡುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ: ರಶ್ಮಿಕಾ ಫ್ಯಾನ್ಸ್‌ಗೆ ಇದು ಶಾಕಿಂಗ್ ಸುದ್ದಿ: ಪುಷ್ಪ2ನಲ್ಲಿ ಶ್ರೀವಲ್ಲಿ ಸತ್ತು ಹೋಗ್ತಾಳಂತೆ ?