ಜೆಟ್‌ಲ್ಯಾಗ್ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಪ್ರಕರಣ: ಮಾಲೀಕರಾದ ಶಶಿರೇಖಾ ವಿಚಾರಣೆ, 8 ಸೆಲೆಬ್ರೆಟಿಗಳಿಗೆ ನೋಟಿಸ್
ಎಸಿಪಿ ಮುಂದೆ ಸುಬ್ರಮಣ್ಯ ನಗರ ಸಿಬ್ಬಂದಿ ಹೇಳಿದ್ದೇನು..?
ಏಷಿಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಎಕ್ಸ್ ಕ್ಲೂಸಿವ್ ಡೀಟೆಲ್ಸ್
ರಾತ್ರಿ 12.45ಕ್ಕೆ ಜೆಟ್ಲಾಗ್ ಗೆ ಹೋಗಿದ್ದ ಪೊಲೀಸ್ ಅಧಿಕಾರಿಗಳು
ಜೆಟ್‌ಲ್ಯಾಗ್ ಪಬ್‌ನಲ್ಲಿ(Jetlag pub) ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಮಾಲೀಕರಾದ ಶಶಿರೇಖಾ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಯಾರೆಲ್ಲ ಪಬ್‌ನಲ್ಲಿ ಇದ್ರು ಅಂತ ರೇಖಾ ಜಗದೀಶ್ ಹೇಳಿದ್ದಾರೆ. ರೇಖಾ ಜಗದೀಶ್ ಹೇಳಿಕೆಯಲ್ಲಿ ನಟ ದರ್ಶನ್(Darshan) ಸೇರಿ 8 ಜನರ ಹೆಸರು ಉಲ್ಲೇಖ ಮಾಡಲಾಗಿದೆ. 8 ಜನರಿಗೂ ಸುಬ್ರಮಣ್ಯನಗರ ಪೊಲೀಸರು ನೊಟೀಸ್(Notice) ಜಾರಿ ಮಾಡಿದ್ದಾರೆ. ಮತ್ತೊಂದ್ ಕಡೆ ಸುಬ್ರಹ್ಮಣ್ಯ ನಗರ ಠಾಣೆ(Subrahmanya Nagar Station) ಅಧಿಕಾರಿಗಳು, ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ. ಜ.4ರಂದು ನೈಟ್ ರೌಂಡ್ಸ್ ನಲ್ಲಿ ಏನೆಲ್ಲಾ ಆಗಿದೆ ಎಂದು ಹೇಳಿಕೆ ದಾಖಲು ಮಾಡಲಾಗಿದೆ. ಟೈಮ್ ಟು ಟೈಮ್ ಘಟನೆ ಬಗ್ಗೆ ವಿವರ ನೀಡಿದ ಅಧಿಕಾರಿಗಳು. ಮಲ್ಲೇಶ್ವರಂ ಎಸಿಪಿ ಮುಂದೆ ಪ್ರತೀ ವಿಚಾರವನ್ನು ಅಧಿಕಾರಿಗಳು ವಿವರಿಸಿದ್ದಾರೆ. ಇದುವರೆಗೂ ಯಾವ ನಟರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಎರಡನೇ ನೋಟೀಸ್ ನೀಡಲು ಪೊಲೀಸರ ಚಿಂತನೆ ನಡೆಸುತ್ತಿದ್ದಾರೆ. ಸದ್ಯ 8 ಮಂದಿಯೂ ಹೊರದೇಶದಲ್ಲಿರೋ ಕುರಿತು ಮಾಹಿತಿ ಇದ್ದು, ಒಂದು ವೇಳೆ ಇಂದೂ ವಿಚಾರಣೆಗೆ ಬರದಿದ್ರೆ ಮತ್ತೊಂದು ನೋಟಿಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕಕ್ಕೆ ಶಾಕ್ ! ರಾಜ್ಯ ಕಳುಹಿಸಿದ್ದ ಟ್ಯಾಬ್ಲೋಗೆ ಇನ್ನೂ ಸಿಕ್ಕಲ್ಲ ಅನುಮತಿ !