ಕರುನಾಡ ಚಕ್ರವರ್ತಿಗೆ ಅಭಿಮಾನಿಗಳ ಸ್ಪೆಷಲ್ ಗಿಫ್ಟ್ : ಮಾರುಕಟ್ಟೆಗೆ ಬಂತು 'ರಾಜವಂಶ' ಸದಸ್ಯರಿರೋ ಗಡಿಯಾರ!
ಮಾರುಕಟ್ಟೆಗೆ ಬಂತು 'ರಾಜವಂಶ'ದ ಗಡಿಯಾರ..!
ಬಳ್ಳಾರಿಯ ಶಿವಣ್ಣನ ಅಭಿಮಾನಿಗಳಿಂದ ಉಡುಗೊರೆ
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಂದ ಗಿಫ್ಟ್..!
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (Shivraj Kumar) ಹುಟ್ಟು ಹಬ್ಬ ಅದ್ಧೂರಿಯಾಗಿ ನಡೆದಿದೆ. ಶಿವರಾಜ್ ಕುಮಾರ್ ತನ್ನ ಘೋಸ್ಟ್ (ghost) ಸಿನಿಮಾದ ಬಿಗ್ಡ್ಯಾಡಿ ಟೀಸರ್ಅನ್ನ ತನ್ನ ಫ್ಯಾನ್ಸ್ಗೆ ಗಿಫ್ಟ್ಆಗಿ ಕೊಟ್ಟಿದ್ದಾರೆ. ಮತ್ತೊಂದ್ ಕಡೆ ಬಳ್ಳಾರಿಯ ಶಿವಣ್ಣನ ಅಭಿಮಾನಿಗಳಿಂದ(Bellary fan) ಒಂದು ಸ್ಪೆಷಲ್ ಉಡುಗೊರೆ ಸೆಂಚುರಿ ಸ್ಟಾರ್ಗೆ ಸಿಕ್ಕಿದೆ. ರಾಜಕುಮಾರ್ ಅವರ ಕುಟುಂಬದ ಎಲ್ಲ ಸದಸ್ಯರು ಇರೋ ರಾಜವಂಶದ ಗಡಿಯಾರವನ್ನ(Clock) ಬಿಡುಗಡೆ ಮಾಡಿದ್ದಾರೆ. ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ ವತಿಯಿಂದ ಮಾಡಿಸಿರೋ ವಿಶೇಷವಾದ ಗಡಿಯಾರದಲ್ಲಿ ರಾಜಕುಮಾರ್, ಪಾರ್ವತಮ್ಮ, ಶಿವರಾಜ್ ಕುಮಾರ, ಪುನೀತ್ ಸೇರಿದಂತೆ ಕುಟುಂಬದ 12 ಸದಸ್ಯರ ಫೋಟೋಗಳಿದ್ದು, 500 ಹೆಚ್ಚಿನ ಗಡಿಯಾರವನ್ನ ಅಭಿಮಾನಿಗಳಿಗೆ ಹಂಚಿದ್ದಾರೆ.
ಇದನ್ನೂ ವೀಕ್ಷಿಸಿ: ಜಪಾನ್‌ನಲ್ಲಿ 'ಕೆಜಿಎಫ್' V/S 'ರಂಗಸ್ಥಳಂ': 'ರಾಕಿ' ಎದುರು ತೊಡೆ ತಟ್ಟಿದ ಚಿಟ್ಟಿಬಾಬು