ಜಪಾನ್‌ನಲ್ಲಿ 'ಕೆಜಿಎಫ್' V/S 'ರಂಗಸ್ಥಳಂ': 'ರಾಕಿ' ಎದುರು ತೊಡೆ ತಟ್ಟಿದ ಚಿಟ್ಟಿಬಾಬು
ಭಾರತ ಚಿತ್ರಗಳಿಗೆ ಜಪಾನ್ ದೊಡ್ಡ ಮಾರ್ಕೆಟ್
ಜಪಾನ್ನಲ್ಲಿ ರಿಲೀಸ್ ಆಗ್ತಿದೆ KGF, KGF-2..!
ರಂಗಸ್ಥಳಂಗೆ ಬೆಳ್ಳಿತೆರೆ ಚಾನ್ಸ್ ಕೊಟ್ಟ ಜಪಾನ್!
ಭಾರತದ ಸಿನಿಮಾಗಳಿಗೆ ಜಪಾನ್ (Japan) ಈಗ ದೊಡ್ಡ ಮಾರ್ಕೆಟ್. ಇದನ್ನ ತೋರಿಸಿಕೊಟ್ಟಿದ್ದು ಎಸ್,ಎಸ್ ರಾಜಮೌಳಿ. ಯಾಕಂದ್ರೆ ರಾಜಮೌಳಿ ತನ್ನ ಸೂಪರ್ ಹಿಟ್ ಸಿನಿಮಾ ಆರ್ಆರ್ಆರ್(RRR) ಚಿತ್ರವನ್ನ ಜಪಾನ್ನಲ್ಲಿ ಬಿಡುಗಡೆ ಮಾಡಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ರು. ಇದೇ ಟ್ರ್ಯಾಕ್ ಹಿಡಿದಿರೋ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ಂ (Hombale Films) ಕೂಡ ತನ್ನ ಸೂಪರ್ ಹಿಟ್ ಸಿನಿಮಾ ಕೆಜಿಎಫ್ಅನ್ನ (KGf) ಜಪಾನ್ನಲ್ಲಿ ರಿಲೀಸ್ ಮಾಡ್ತಿದೆ. ಅಷ್ಟೆ ಅಲ್ಲ ಕೆಜಿಎಫ್ ಜೊತೆಗೆ ತೆಲುಗುನ ರಾಮ್ಚರಣ್ ನಟನೆಯ ರಂಗಸ್ಥಳಂ ಕೂಡ ಜಪಾನ್ನಲ್ಲಿ ತೆರೆ ಕಾಣುತ್ತಿದೆ. ಈ ಎರಡು ಸಿನಿಮಾಗಳು ಈಗ ಜಪಾನ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ರಾಮ್ ಚರಣ್ ಮಧ್ಯೆ ಟಫ್ ಟಗಾಫರ್ಗೆ ಸಾಕ್ಷಿಯಾಗ್ತಿವೆ. ಶುಕ್ರವಾರ ಜಪಾನ್ನಲ್ಲಿ ಕೆಜಿಎಫ್, ಕೆಜಿಎಫ್ ಚಾಪ್ಟರ್-2 ಸಿನಿಮಾಗಳು ತೆರೆ ಕಾಣುತ್ತಿವೆ. ಅದೇ ಟೈಂನಲ್ಲಿ ರಾಮ್ ಚರಣ್ರ ಸೂಪರ್ ಹಿಟ್ ಮೂವಿ ರಂಗಸ್ಥಳಂ ಕೂಡ ಜಪಾನಿ ಭಾಷೆಗೆ ಡಬ್ ಆಗಿ ತೆರೆ ಕಾಣುತ್ತಿದೆ. ಈಗಾಗ್ಲೆ ಈ ಸಿನಿಮಾಗಳ ಟಿಕೇಟ್ ಬುಕ್ಕಿಂಗ್ ಶುರುವಾಗಿದ್ದು, ಕೆಜಿಎಫ್ ರಾಕಿ ಎದುರು ರಂಗಸ್ಥಳಂನ ಚಿಟ್ಟಿಬಾಬು ತೊಡೆತಟ್ಟಿದ್ದಾನೆ. ಟಿಕೆಟ್ ಬುಕ್ಕಿಂಗ್ನಲ್ಲಿ ಕೆಜಿಎಫ್ ರಾಕಿಯನ್ನೇ ಮೀರಿಸಿದ್ದಾನೆ ರಂಗಸ್ಥಳಂನ ಚಿಟ್ಟಿಬಾಬು.
ಇದನ್ನೂ ವೀಕ್ಷಿಸಿ: ಅದ್ಭುತ ಕಾರ್ಯಕ್ರಮ, ದಿಗ್ಗಜರ ಸಮಾಗಮ... ಡಿವೈನ್ ಸ್ಟಾರ್‌ಗೆ ಸಿಕ್ಕಿತ್ತು ಮೈಜುಮ್ಮೆನ್ನಿಸುವ ದೈವೀ ಸ್ವಾಗತ !