2024ಕ್ಕೆ ಕನ್ನಡದಲ್ಲಿ ಹುಟ್ಟುತ್ತಾರಾ ಪ್ಯಾನ್ ಇಂಡಿಯಾ ಸ್ಟಾರ್ಸ್? ಯಾವ ಹೀರೋಗಿದೆ ಆ ಲಕ್ ?
ಸ್ಯಾಂಡಲ್‌ವುಡ್ ಜಗತ್ತಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋ ಕಿರೀಟವನ್ನ ಮೊದಲು ಹೊತ್ತು ಮೆರೆದವರು ರಾಕಿಂಗ್ ಸ್ಟಾರ್ ಯಶ್. ಆ ನಂತ್ರ ಆ ಕಿರೀಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಶಿಫ್ಟ್ ಆಯ್ತು. ಇದೆಲ್ಲಾ ಆಗಿದ್ದು ಕಳೆದ ವರ್ಷ 2022ರಲ್ಲಿ.
ಕಳೆದ ವರ್ಷ ಸೃಷ್ಟಿಯಾದ ಪ್ಯಾನ್ ಇಂಡಿಯಾ ಸಾಧನೆಯನ್ನ ನಮ್ಮ ಕನ್ನಡ ಹೀರೋಗಳು ಈ ವರ್ಷವೂ ಕ್ರಿಯೆಟ್ ಮಾಡ್ತಾರೆ ಅನ್ನೋ ಆಸೆ ಆಕಾಂಕ್ಷೆ ಇತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಮುಗಿದ ಅಧ್ಯಾಯ. ಬಟ್ 2024 ನಮ್ ಕನ್ನಡ ಚಿತ್ರರಂಗದ ಪಾಲಿಗೆ ಗೋಲ್ಡನ್ ಈಯರ್ ಆಗ್ತಿದೆ. 2024ರಲ್ಲಿ ಭಾರತೀಯ ಚಿತ್ರರಂಗವನ್ನ ಆಳೋದು ನಾವೇ ಬಿಡಿ. ಯಾಕಂದ್ರೆ ಮುಂದಿನ ವರ್ಷ ಕನ್ನಡದಲ್ಲಿ(Kannada) ಏನಿಲ್ಲ ಅಂದ್ರು ಆರು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗ್ತಿವೆ. ಧ್ರುವ ಸರ್ಜಾ(Druva sarja) ನಟನೆಯ ಮಾರ್ಟಿನ್ ಹಾಗು ಕೆಡಿ, ಕಿಚ್ಚ ಸುದೀಪ್(Sudeep) ನಟನೆಯ ಮ್ಯಾಕ್ಸ್, ರಿಯಲ್ ಸ್ಟಾರ್ ಉಪ್ಪಿ ಡೈರೆಕ್ಷನ್ನ ಯುಐ, ಯುವ ರಾಜ್ ಕುಮಾರ್(yuva Rajkumar) ನಟನೆಯ ಯುವ ಹಾಗು ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್2 ಸಿನಿಮಾಗಳು. ನೆಕ್ಟ್ಸ್ ಈಯರ್ ಬಾಕ್ಸಾಫೀಸ್ಅನ್ನ ಆಳಲಿವೆ. ನೆಕ್ಟ್ಸ್ ಈಯರ್ ಕನ್ನಡದ ಯಾವ ಹೀರೋಕೆ ಪ್ಯಾನ್ ಇಂಡಿಯಾ ಪಟ್ಟ ತಂದು ಕೊಡುತ್ತೆ.? ಈ ಲೆಕ್ಕಾಚಾರ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. ಯಾಕಂದ್ರೆ ಧ್ರುವ, ಯುವ, ಉಪ್ಪಿ, ಕಿಚ್ಚ, ರಿಷಬ್, ಉಪೇಂದ್ರ ಪ್ಯಾನ್ ಇಂಡಿಯಾ (Pan India movies ) ಪೈಪೋಟಿಗೆ ನಾವ್ ರೆಡಿ ಅಂತಿದ್ದಾರೆ. ಈ ಸ್ಟಾರ್ಗಳ ಸಿನಿಮಾಗಳು ಮುಂದಿನ ವರ್ಷ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಲಿದೆ.
ಇದನ್ನೂ ವೀಕ್ಷಿಸಿ: ಆ್ಯಕ್ಷನ್ ಪ್ರಿನ್ಸ್ 'KD' ಪ್ರಪಂಚಕ್ಕೆ ಧರ್ಮನ ಎಂಟ್ರಿ! ಕೆಡಿಗೂ ಧರ್ಮನಿಗೂ ಏನು ಸಂಬಂಧ ?