ದಕ್ಷಿಣ ಚಿತ್ರರಂಗದ ದಶ ದಿಕ್ಕಿನಲ್ಲಿ ಸೆಂಚುರಿ ಸ್ಟಾರ್ ಮಿಂಚು: ಜೈಲರ್‌ನಲ್ಲಿ ಹೆಚ್ಚಾಯ್ತು ಉಗ್ರವತಾರಿ 'ನರಸಿಂಹ'ನ ಕಿಚ್ಚು !
ಜೈಲರ್‌ನ ನರಸಿಂಹನ ಕಿಚ್ಚಿನಿಂದ ಘೋಸ್ಟ್‌ಗೆ ಬೇಡಿಕೆ!
ಘೋಸ್ಟ್ ವಿತರಣೆಗೆ ಮುಗಿಬಿದ್ದ ಕಾಲಿವುಡ್,ಟಾಲಿವುಡ್!
ಸೌತ್ ಸಿನಿ ರಂಗದಲ್ಲಿ ಧೂಳೆಬ್ಬಿಸುತ್ತಿದ್ದಾರೆ ಶಿವಣ್ಣ!
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Shivarajkumar) ಸ್ಯಾಂಡಲ್‌ವುಡ್‌ನ ಬಿಗ್‌ಡ್ಯಾಡಿ. ಶಿವಣ್ಣನ ಅಭಿಮಾನಿಗಳು ಈ ಬಿಗ್ ಡ್ಯಾಡಿಯ ಘೋಸ್ಟ್(Ghost) ನೋಡೋಕೆ ದಿನ ಲೆಕ್ಕ ಹಾಕ್ತಿದ್ರು. ಆದ್ರೆ ಆ ಬಿಗ್ ಡ್ಯಾಡಿ ಬರೋ ಮೊದಲೇ ಕರುನಾಡು ಚಕ್ರವರ್ತಿ ತಮಿಳು ಸಿನಿಮಾ ಜೈಲರ್‌ನಲ್ಲಿ ಉಗ್ರಾವತಾರಿ ನರಸಿಂಹನಾಗಿ ದರ್ಶನ ಕೊಟ್ಟಿದ್ದಾರೆ. ಈ ಉಗ್ರಾವತಾರ ಹೇಗಿದೆ ಅಂದ್ರೆ, ತಲೈವಾ ರಜನಿಯ ಕ್ರೇಜ್ಅನ್ನೇ ಸೈಡಿಗಿಟ್ಟು ದಕ್ಷಿಣ ಭಾರತ ಸಿನಿಮಾ ರಂಗದ ದಶ ದಿಕ್ಕಿನಲ್ಲೂ ಮಿಂಚಿನ ಸಂಚಲನ ಸೃಷ್ಟಿಸಿದ್ದಾರೆ ಶಿವಣ್ಣ. ಜೈಲರ್(Jailer) ನೋಡಿದ ಪ್ರತಿಯೊಬ್ಬರು ಶಿವಣ್ಣನ ನರಸಿಂಹನ ಪಾತ್ರದ ಗುಣ ಗಾನ ಮಾಡುತ್ತಿದ್ದಾರೆ. ಜೈಲರ್ ಅಪ್ಪಟ ರಜನಿಕಾಂತ್ ಸಿನಿಮಾ. ಈ ಸಿನಿಮಾದಲ್ಲಿ ಶಿವಣ್ಣರದ್ದು ಕೇವಲ 10 ನಿಮಿಷ ಬರೋ ಚಿಕ್ಕದೊಂದು ಪಾತ್ರ. ಆದ್ರೆ ಆ ರೋಲ್ ಎಷ್ಟು ವೈಲೆಂಟ್, ವೈಬ್ರೇಷನ್ ಅಂದ್ರೆ ಇಂದು ಕನ್ನಡ, ತೆಲುಗು, ತಮಿಳು ಚಿತ್ರರಸಿಕರು ರಜನಿಕಾಂತ್‌ಗಿಂತ ಶಿವಣ್ಣರ ಅಭಿನಯವನ್ನೇ ಕೊಂಡಾಡುತ್ತಿದ್ದಾರೆ. ಶಿವಣ್ಣ ತನ್ನ 10 ನಿಮಿಷದ ಅಭಿನಯದಿಂದ ಸೂಪರ್ ಸ್ಟಾರ್ ರಜನಿಯನ್ನೇ ನುಂಗಿದ್ದಾರೆ. ಈ ಎಫೆಕ್ಟ್ ಈಗ ಕನ್ನಡದ ಘೋಸ್ಟ್ ಮೇಲೆ ಹೊಸ ನಿರೀಕ್ಷೆಗೆ ಕಾರಣ ಆಗಿದ್ದು, ಬಿಗ್ಡ್ಯಾಡಿ ಘೋಸ್ಟ್ಗೆ ಭಾರಿ ಬೇಡಿಕೆ ಕ್ರಿಯೆಟ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: Today Horoscope: ಮೇಷ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲ..ತಾಯಿಯೊಂದಿಗಿನ ಬಾಂಧವ್ಯ ಕಡಿಮೆ