18ನೇ ವರ್ಷದ ಬರ್ತಡೇಯಲ್ಲಿ 'ಜೋಗಿ': ಈ ಸಿನಿಮಾ ಹುಟ್ಟಿಗೆ ಕಾರಣ ಯಾರು ಗೊತ್ತಾ ?

ಶಿವಣ್ಣನ 'ಜೋಗಿ'ಗೆ 18ನೇ ವರ್ಷದ ಹುಟ್ಟುಹಬ್ಬ.!
'ಜೋಗಿ' ಹುಟ್ಟಿಗೆ ಕಾರಣ ಯಾರು ಗೊತ್ತಾ..?
ಅಮ್ಮನ ಕಥೆಯನ್ನೇ ಸಿನಿಮಾ ಮಾಡಿದ್ದ ಪ್ರೇಮ್..!

First Published Aug 20, 2023, 9:32 AM IST | Last Updated Aug 20, 2023, 9:32 AM IST

ಜೋಗಿ.. ಈ ಹೆಸರನ್ನ ಕನ್ನಡ ಸಿನಿ ಪ್ರೇಕ್ಷಕ ಎಂದಾದ್ರು ಮರೆಯೋಕೆ ಸಾಧ್ಯನಾ..? ನೋ ಚಾನ್ಸ್.. ಯಾಕಂದ್ರೆ ಜೋಗಿ ಸಿನಿಮಾ(Jogi cinema) ಕನ್ನಡದ ವಜ್ರ. ಹತ್ತಾರು ಜನ ಕಲಾವಿಧರಿಗೆ ಜನ್ಮಕೊಟ್ಟ ಚಿತ್ರ. ಇಂದು ನೀವೆಲ್ಲಾ ಹೇಗೆ ಕೆಜಿಎಫ್ ಜಪಾ ಮಾಡುತ್ತಿದ್ದೀರೋ ಹಾಗೆ ಜೋಗಿ ಜಪ 2005ರಿಂದಲೇ ನಡೆಯುತ್ತಿದೆ. ಅಂದು ಇಡೀ ಇಂಡಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಗೆ ಜೋಗಿ ಹೆಸರಿನಲ್ಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivaraj kumar) ಕೈಗೆ ಲಾಂಗ್ ಕೊಟ್ಟಿದ್ದ ನಿರ್ದೇಶಕ ಪ್ರೇಮ್ ಬಾಕ್ಸಾಫೀಸ್ ಪೀಸ್ ಪೀಸ್ ಆಗುವಂತೆ ಮಾಡಿದ್ರು. ಇಂತಹ ಜೋಗಿಗೆ ಶನಿವಾರ ಹುಟ್ಟುಹಬ್ಬ. ಜೋಗಿ ಸಿನಿಮಾ ರಿಲೀಸ್ ಆಗಿ ಇಂದಿಗೆ ಬರೋಬ್ಬರಿ 18 ವರ್ಷ. ಹಾಗಾದ್ರೆ ಜೋಗಿ ಹುಟ್ಟಿಗೆ ಕಾರಣ ಆಗಿದ್ದು ಯಾರು.? ಅದೇ ಇಂಟ್ರೆಸ್ಟಿಂಗ್ ವಿಷಯ. ನಿರ್ದೇಶಕ ಪ್ರೇಮ್(Director prem) ಆಗಿನ್ನು ಚಿತ್ರರಂಗಕ್ಕೆ ಕಾಲಿಟ್ಟ ಸಮಯ. ಹೊಸ ಹುಡುಗರ ತಂಡ ಕಟ್ಟಿದ್ದ ಪ್ರೇಮ್ ತನ್ನ ಎರಡನೇ ಸಿನಿಮಾ ಎಕ್ಸ್ಕ್ಲ್ಯೂಸ್ಮಿ ಅನ್ನೋ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ರು. ಇದನ್ನ ನೋಡಿದ ಅಣ್ಣಾವ್ರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಪ್ರೇಮ್ರನ್ನ ಮನೆಗೆ ಕರೆಸಿ ನನ್ನ ಮಗ ಶಿವುಗು ಒಂದು ಸಿನಿಮಾ ಮಾಡು ಅಂದಿದ್ರು. ಶಿವಣ್ಣನ ಜೊತೆ ಸಿನಿಮಾನಾ ಅಂತ ತಲೆ ಕೆಡಿಸಿಕೊಂಡಿದ್ದ ಪ್ರೇಮ್ ಬಳಿ ಒಂದೇ ಒಂದು ಕಥೆಯೂ ಇರಲಿಲ್ಲ. ಆದ್ರೆ ಸದಾಶಿವನಗರದಲ್ಲಿ ಅಣ್ಣಾವ್ರ ಆಫೀಸ್‌ನಲ್ಲಿ ಶಿವಣ್ಣ ಪ್ರೇಮ್ ಜೊತೆ ಮಾತನಾಡಿದ್ಮೇಲೆ ಜೋಗಿ ಕಲ್ಪನೆ ಹುಟ್ಟಿಕೊಳ್ತು. ಅಣ್ಣಾವ್ರ ಆಫೀಸ್‌ನಿಂದ ವಿಜಯನಗರದಲ್ಲಿರದ್ದ ತನ್ನ ಆಫೀಸ್‌ಗೆ ಬರೋ ಮಧ್ಯೆ ಬರೀ 30 ನಿಮಿಷದಲ್ಲಿ ಜೋಗಿಯ ಒನ್ ಲೈನ್ ಸ್ಟೋರಿ ರೆಡಿ ಮಾಡಿದ್ರು ಪ್ರೇಮ್.

ಇದನ್ನೂ ವೀಕ್ಷಿಸಿ:  ಶ್ರಾವಣದಲ್ಲಿ ಮಾರಿ ಹಬ್ಬ ಮಾಡುತ್ತೆ ಸ್ಯಾಂಡಲ್‌ವುಡ್‌: ಸಿಕ್ಕಿದೆ ಮಾರಿಗೆ ದಾರಿ..ಶೆಟ್ರ 'ಟೋಬಿ' ಭಾರೀ ಅದ್ಧೂರಿ!